ADVERTISEMENT

ಇಸ್ರೇಲ್‌ನ ಅತಿ ದೊಡ್ಡ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

ಏಜೆನ್ಸೀಸ್
Published 19 ಜೂನ್ 2025, 7:14 IST
Last Updated 19 ಜೂನ್ 2025, 7:14 IST
<div class="paragraphs"><p>ಇಸ್ರೇಲ್‌ನ ಅತಿ ದೊಡ್ಡ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್</p></div>

ಇಸ್ರೇಲ್‌ನ ಅತಿ ದೊಡ್ಡ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

   

ಪಿಟಿಐ ಚಿತ್ರ

ಜೆರುಸಲೆಂ: ದಕ್ಷಿಣ ಇಸ್ರೇಲ್‌ನ ಸರೋಕಾ ವೈದ್ಯಕೀಯ ಕೇಂದ್ರದ ಕಟ್ಟಡದ ಮೇಲೆ ಗುರುವಾರ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ ಕಟ್ಟಡದ ಒಳಗಿದ್ದ ಹಲವರು ಗಾಯಗೊಂಡಿದ್ದು, ಭಾರಿ ಹಾನಿಯುಂಟಾಗಿದೆ ಎಂದು ಇಸ್ರೇಲಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ. 

ADVERTISEMENT

ದಾಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ದಾಳಿಗೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದ್ದಾರೆ.

ವರದಿಗಳ ಪ್ರಕಾರ ದಾಳಿಯಲ್ಲಿ ಕನಿಷ್ಠ 47 ಮಂದಿ ಗಾಯಗೊಂಡಿದ್ದಾರೆ.

ಸರೋಕಾ ವೈದ್ಯಕೀಯ ಕೇಂದ್ರ ಇಸ್ರೇಲ್‌ನಲ್ಲಿನ ಅತಿದೊಡ್ಡ ಆಸ್ಪತ್ರೆಯಾಗಿದೆ.

ಕ್ಷಿಪಣಿ ದಾಳಿಯಾದ ಸಂದರ್ಭದಲ್ಲಿ ಆಸ್ಪತ್ರೆಯ ಒಳಗೆ ಉಂಟಾದ ತಲ್ಲಣದ ದೃಶ್ಯಗಳ ವಿಡಿಯೊಗಳನ್ನು ಇಸ್ರೇಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಹಾರಿಹೋದ ಕಿಟಕಿಗಳು, ಕಟ್ಟಡದ ಒಳಗೆ ದಟ್ಟವಾದ ಕಪ್ಪು ಹೊಗೆ ಆವರಿಸುರುವುದು, ಜನರು, ವೈದ್ಯರು ಭಯದಿಂದ ದಿಕ್ಕಾಪಾಲಾಗಿ ಓಡುವ ದೃಶ್ಯಗಳು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.