ADVERTISEMENT

ಈವರೆಗೂ ಇಸ್ರೇಲ್ ಜೊತೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ: ಇರಾನ್ ವಿದೇಶಾಂಗ ಸಚಿವ

ಏಜೆನ್ಸೀಸ್
Published 24 ಜೂನ್ 2025, 2:47 IST
Last Updated 24 ಜೂನ್ 2025, 2:47 IST
<div class="paragraphs"><p>ಅಬ್ಬಾಸ್ ಅರಾಗ್ಚಿ</p></div>

ಅಬ್ಬಾಸ್ ಅರಾಗ್ಚಿ

   

– ಎಕ್ಸ್

ಟೆಹರಾನ್: ಇಸ್ರೇಲ್ ಜೊತೆಗೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ.

ADVERTISEMENT

ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಬ್ಬಾಸ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಇಸ್ರೇಲ್ ದಾಳಿ ನಿಲ್ಲಿಸಿದ ಕೂಡಲೇ ನಾವು ನಿಲ್ಲಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಯುದ್ಧ ಪ್ರಾರಂಭಿಸಿದ್ದು ಇಸ್ರೇಲ್, ನಾವಲ್ಲ ಎಂದು ನಾವು ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಈವರೆಗೂ ಕದನ ವಿರಾಮ ಅಥವಾ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ’ ಎಂದು ಅಬ್ಬಾಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇರಾನ್ ಜನತೆ ಮೇಲೆ ಇಸ್ರೇಲ್ ಆಡಳಿತವು ನಡೆಸುತ್ತಿರುವ ಕಾನೂನು ಬಾಹಿರ ಆಕ್ರಮಣವನ್ನು ಟೆಹರಾನ್ ಸಮಯ ಬೆಳಿಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ಅವರಿಗೆ ಪ್ರತ್ಯುತ್ತರ ನೀಡುವ ಯಾವುದೇ ಉದ್ದೇಶ ನಮಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

ನಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.