ADVERTISEMENT

ಅಮೆರಿಕ ದಾಳಿ ಮಾಡುವ ಮೊದಲೇ ಯುರೇನಿಯಂ ಸಾಗಿಸಿದ್ದ ಇರಾನ್: ಯುರೋಪಿಯನ್ ಒಕ್ಕೂಟ

ಏಜೆನ್ಸೀಸ್
Published 26 ಜೂನ್ 2025, 15:26 IST
Last Updated 26 ಜೂನ್ 2025, 15:26 IST
<div class="paragraphs"><p>ಇರಾನ್‌ನ&nbsp;ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ</p></div>

ಇರಾನ್‌ನ ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ

   

ರಾಯಿಟರ್ಸ್ ಚಿತ್ರ

ಟೆಹರಾನ್‌: ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದೆಯಾದರೂ, ಆ ದೇಶದ (ಇರಾನ್‌) ಯುರೇನಿಯಂ ಸಂಪತ್ತು ಹಾಗೆಯೇ ಇದೆ ಎಂದು ಯುರೋಪಿಯನ್ ಒಕ್ಕೂಟದ ನಾಯಕರು ಅಂದಾಜಿಸಿರುವುದಾಗಿ ಗುರುವಾರ ವರದಿಯಾಗಿದೆ.

ADVERTISEMENT

ಪರಮಾಣು ಶಸ್ತ್ರಾಸ್ತ್ರ ತಯಾರಿಗೆ ಅಗತ್ಯವಾದಷ್ಟು ಗುಣಮಟ್ಟಕ್ಕೆ ಹತ್ತಿರದಲ್ಲಿದ್ದ ಸುಮಾರು 408 ಕೆ.ಜಿ. ಯುರೇನಿಯಂ, ದಾಳಿ ನಡೆದ ಸಂದರ್ಭದಲ್ಲಿ ಫೋರ್ಡೊ ಘಟಕದಲ್ಲಿ ಇರಲಿಲ್ಲ ಎಂಬುದು ಗುಪ್ತಚರ ಮೂಲಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ ಎಂದು 'Financial Times' ವರದಿ ಮಾಡಿದೆ.

ಇಸ್ರೇಲ್‌ – ಇರಾನ್‌ ಯುದ್ಧದಲ್ಲಿ ಮಧ್ಯಪ್ರವೇಶಿಸಿದ್ದ ಅಮೆರಿಕ, ಇರಾನ್‌ನ ಅಣ್ವಸ್ತ್ರ ಯೋಜನೆಗಳನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಫೋರ್ಡೊ, ನತಾಂಜ್‌ ಮತ್ತು ಎಸ್ಫಹಾನ್ ಪರಮಾಣು ಮೂಲಸೌಕರ್ಯಗಳ ಮೇಲೆ ಜೂನ್‌ 21ರ ತಡರಾತ್ರಿ ದಾಳಿ ಮಾಡಿತ್ತು.

ಇದರಿಂದ ಇರಾನ್‌ಗೆ ಭಾರಿ ಹಾನಿಯಾಗಿದೆ ಎಂದು ಹೇಳಲಾಗಿತ್ತು.

ಅಮೆರಿಕ ದಾಳಿಯಿಂದ ಕೆರಳಿದ್ದ ಇರಾನ್‌, ಇಸ್ರೇಲ್‌ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿತ್ತು. ಹಾಗೆಯೇ, ಇರಾಕ್‌, ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ಕ್ಷಿಪಣಿ ದಾಳಿ ಮಾಡಿತ್ತು.

ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌–ಇರಾನ್ ಕದನ ವಿರಾಮವನ್ನು ಮಂಗಳವಾರ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.