ADVERTISEMENT

Iran Unrest | ಪ್ರತಿಭಟನಕಾರರ ಹತ್ಯೆ ನಿಂತಿದೆ, ಮರಣದಂಡನೆಯೂ ಇಲ್ಲ: ಟ್ರಂಪ್

ಏಜೆನ್ಸೀಸ್
Published 15 ಜನವರಿ 2026, 5:29 IST
Last Updated 15 ಜನವರಿ 2026, 5:29 IST
<div class="paragraphs"><p>ಡೊನಾಲ್ಡ್‌ ಟ್ರಂಪ್</p></div>

ಡೊನಾಲ್ಡ್‌ ಟ್ರಂಪ್

   

ವಾಷಿಂಗ್ಟನ್: ‘ಇರಾನ್‌ನಲ್ಲಿ ಬಂಧಿತ ಪ್ರತಿಭಟನಕಾರರ ವಿರುದ್ಧ ತ್ವರಿತವಾಗಿ ವಿಚಾರಣೆ ನಡೆಸಿ, ಮರಣದಂಡನೆ ವಿಧಿಸುವ ಯಾವುದೇ ಕ್ರಮಗಳಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಇರಾನ್‌ನಲ್ಲಿ ಪ್ರತಿಭಟನಕಾರರ ಹತ್ಯೆ ನಿಂತಿದೆ. ಜತೆಗೆ, ಮರಣದಂಡನೆ ವಿಧಿಸುವ ಯಾವುದೇ ಕ್ರಮಗಳಿಲ್ಲ ಎಂದು ಉನ್ನತ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ. ಆದರೂ, ಈ ಕುರಿತು ನಾವು ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದೂ ಟ್ರಂಪ್ ತಿಳಿಸಿದ್ದಾರೆ.

ADVERTISEMENT

ಹೆಚ್ಚಿದ ಉದ್ವಿಗ್ನತೆ

‘ಇರಾನ್ ಸರ್ಕಾರವು ಪ್ರತಿಭಟನಕಾರರ ವಿರುದ್ಧ ಮರಣದಂಡನೆಯಂತಹ ಕ್ರಮಗಳನ್ನು ತೆಗೆದುಕೊಂಡರೆ, ಅಮೆರಿಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಇರಾನ್ ನಾಯಕತ್ವವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಇರಾನ್‌ ಭದ್ರತಾ ಪಡೆಗಳಿಂದ ಕನಿಷ್ಠ 3,428 ಪ್ರತಿಭಟನಕಾರರು ಮೃತಪಟ್ಟಿದ್ದಾರೆ. ಹೆಚ್ಚುವರಿಯಾಗಿ ಇರಾನ್‌ನಲ್ಲಿ ಕನಿಷ್ಠ 18,000 ಜನರನ್ನು ಬಂಧಿಸಲಾಗಿದೆ. ಇರಾನ್ ಪ್ರತಿಭಟನಕಾರರ ಮೇಲಿನ ಕಠಿಣ ಕ್ರಮದ ನಡುವೆ ಸಾಮೂಹಿಕ ಹತ್ಯೆಗಳ ಪುರಾವೆಗಳು ಲಭಿಸಿವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ವಾಷಿಂಗ್ಟನ್ ದೇಶದಲ್ಲಿ ಯಾವುದೇ ಮಿಲಿಟರಿ ಕ್ರಮ ಕೈಗೊಂಡರೆ ಇರಾನ್ ನೆರೆಯ ದೇಶಗಳಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತದೆ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಸತಿ ಕಟ್ಟಡಗಳು, ಮಸೀದಿಗಳು ಮತ್ತು ಪೊಲೀಸ್ ಠಾಣೆಗಳ ಮೇಲಿಂದ ಪ್ರತಿಭಟನಕಾರರನ್ನು ಗುರಿಯಾಗಿಸಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸುತ್ತಿರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.