ADVERTISEMENT

ವಿಜ್ಞಾನಿ ಹತ್ಯೆ: ಇರಾನ್‌ನಿಂದ ಪ್ರತಿಕಾರದ ಪ್ರತಿಜ್ಞೆ

ಏಜೆನ್ಸೀಸ್
Published 28 ನವೆಂಬರ್ 2020, 12:51 IST
Last Updated 28 ನವೆಂಬರ್ 2020, 12:51 IST
ಮೊಹ್ಸೆನ್‌ ಫಖ್ರಿಜಾದೆಹ್‌
ಮೊಹ್ಸೆನ್‌ ಫಖ್ರಿಜಾದೆಹ್‌   

ಟೆಹರಾನ್‌: ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಅವರ ಹತ್ಯೆಯನ್ನು ಖಂಡಿಸಿರುವ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು, ‘ಇವರ ಹತ್ಯೆಯ ಹಿಂದಿರುವವರಿಗೆ ತಕ್ಕ ಶಿಕ್ಷೆಯಾಗಲಿದೆ’ ಎಂದು ಶನಿವಾರ ಹೇಳಿದ್ದಾರೆ.

ಈ ಹತ್ಯೆಯ ಹಿಂದೆ ಇಸ್ರೆಲ್‌ ಕೈವಾಡವಿದೆ ಎಂದು ಇರಾನ್‌ ಆರೋಪಿಸಿದೆ. ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ಬಳಿಕ ಹಲವು ವಿಜ್ಞಾನಿಗಳ ಹತ್ಯೆಯಾಗಿದ್ದು, ಇದರ ಹಿಂದೆ ಇಸ್ರೆಲ್‌ ಕೈವಾಡವಿದೆ ಎಂದು ಇರಾನ್‌ ಹಲವು ವರ್ಷಗಳಿಂದ ಸಂಶಯ ವ್ಯಕ್ತಪಡಿಸುತ್ತಿದೆ. ಫಖ್ರಿಜಾದೆಹ್‌ ಅವರ ಹತ್ಯೆಯ ಬಗ್ಗೆ ಇಸ್ರೆಲ್‌ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ಹತ್ಯೆಯು ಸೇನಾ ಮಾದರಿಯಲ್ಲಿ ಹೊಂಚು ಹಾಕಿ, ಯೋಜನಾಬದ್ಧವಾಗಿ ನಡೆಸಿದ ಕೃತ್ಯವಾಗಿರುವುದಕ್ಕೆ ಎಲ್ಲ ಸಾಕ್ಷ್ಯಗಳೂ ಇವೆ.

‘ಫಖ್ರಿಜಾದೆಹ್‌ ಅವರು ರಾಷ್ಟ್ರದ ಪ್ರಮುಖ ಹಾಗೂ ಉನ್ನತ ಪರಮಾಣ ಮತ್ತು ರಕ್ಷಣಾ ವಿಭಾಗದ ವಿಜ್ಞಾನಿಯಾಗಿದ್ದರು. ಹತ್ಯೆ ಮಾಡಿದವರಿಗೆ ಹಾಗೂ ಅದನ್ನು ಆದೇಶಿಸಿದವರಿಗೆ ತಕ್ಕೆ ಶಿಕ್ಷೆ ನೀಡುವುದು ಇರಾನ್‌ನ ಆದ್ಯತೆಯಾಗಿದೆ’ ಎಂದು ಖಮೇನಿ ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಫಖ್ರಿಜಾದೆಹ್‌ ಅವರ ಹತ್ಯೆಯಿಂದ ದೇಶದ ಪರಮಾಣು ಯೋಜನೆಯು ಸ್ಥಗಿತಗೊಳ್ಳುವುದಿಲ್ಲ. ಅವರ ಹತ್ಯೆಯ ಹಿಂದೆ ಇಸ್ರೆಲ್‌ ಕೈವಾಡವಿದೆ. ಸಮಯ ಬಂದಾಗ ಹುತಾತ್ಮ ವಿಜ್ಞಾನಿಯ ಹತ್ಯೆಗೆ ತಕ್ಕೆ ಪ್ರತಿಕ್ರಿಯೆ ನೀಡಲಿದ್ದೇವೆ’ ಎಂದು ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.