ADVERTISEMENT

ಇರಾಕ್‌: ಶೀಘ್ರ ಚುನಾವಣೆ ನಡೆಸಿ ಎಂದ ಅಮೆರಿಕ

ಏಜೆನ್ಸೀಸ್
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST

ವಾಷಿಂಗ್ಟನ್‌: ‘ಪ್ರತಿಭಟನಕಾರರ ವಿರುದ್ಧ ನಡೆಸುತ್ತಿರುವ ಹಿಂಸೆಯನ್ನು ನಿಲ್ಲಿಸಿ, ಆದಷ್ಟು ಬೇಗ ಚುನಾವಣೆ ನಡೆಸಿ’ ಎಂದು ಇರಾಕ್‌ಗೆ ಅಮೆರಿಕ ಒತ್ತಾಯಿಸಿದೆ.

ದೇಶದಲ್ಲಿನ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಕಳಪೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿನ ಯುವಕರು ದೇಶದ ನಾನಾ ಭಾಗಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ನೂರಾರು ಪ್ರತಿಭಟನಕಾರರು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.

‘ಪ್ರತಿಭಟನಕಾರರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ. ಚುನಾವಣಾ ಸುಧಾರಣೆ ಮಾಡುವುದಾಗಿ ಹೇಳಿದ್ದ ಅಧ್ಯಕ್ಷ ಬರ್ಹಮ್‌ ಸಲೀಹ್‌ ಅವರ ಮಾತುಗಳನ್ನು ಪಾಲಿಸಿ’ ಎಂದು ಶ್ವೇತಭವನ ಹೇಳಿಕೆ ನೀಡಿದೆ.

ADVERTISEMENT

‘ನಾಗರಿಕರು, ಪ್ರತಿಭಟನಕಾರರು, ಮಾಧ್ಯಮದ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಂತರ್ಜಾಲದ ನಿಯಂತ್ರಣದಂತಹ ಸರ್ಕಾರದ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಅಮೆರಿಕ ಹೇಳಿದೆ.

ಇರಾಕ್‌ನ ಪ್ರಧಾನಿಯಾಗಿ ಅದೆಲ್‌ ಅಬ್ದುಲ್‌ ಮಹದಿ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.