ADVERTISEMENT

ಲಂಡನ್‌ ದಾಳಿ: ಹೊಣೆ ಹೊತ್ತ ಐಎಸ್‌

ಪಿಟಿಐ
Published 1 ಡಿಸೆಂಬರ್ 2019, 18:42 IST
Last Updated 1 ಡಿಸೆಂಬರ್ 2019, 18:42 IST

ಲಂಡನ್‌: ಲಂಡನ್‌ ಬ್ರಿಡ್ಜ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಐಎಸ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಉಗ್ರ ಉಸ್ಮಾನ್‌ ಖಾನ್‌ ಎಂಬಾತ ಶುಕ್ರವಾರ ರಾತ್ರಿ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿದ್ದ. ಅನಂತರ ಪೊಲೀಸರು ಆತನನ್ನುಹೊಡೆದುರುಳಿಸಿದ್ದರು.

‘ನಾಗರಿಕರನ್ನು ಗುರಿಯಾಗಿಸಿ ಐಎಸ್‌ ಹೋರಾಟಗಾರ ಈ ದಾಳಿ ನಡೆಸಿದ್ದಾನೆ’ ಎಂದು ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ‘ಅಮಾಕ್‌ ನ್ಯೂಸ್‌ ಏಜೆನ್ಸಿ’ ವರದಿ ಮಾಡಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ.

ADVERTISEMENT

ಅಲ್‌ ಕೈದಾ ಜೊತೆಗೂ ಉಸ್ಮಾನ್‌ಗೆ ನಂಟು ಇತ್ತು ಎಂಬುದನ್ನು ಈ ಹಿಂದೆ ಅಧಿಕಾರಿಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.