ADVERTISEMENT

ಕಾಬೂಲ್‌ ಗುರುದ್ವಾರದ ಮೇಲೆ ದಾಳಿ: ಐಎಸ್ ಉಗ್ರ ಅಸ್ಲಾಂ ಫಾರೂಖಿ ಬಂಧನ

ಏಜೆನ್ಸೀಸ್
Published 5 ಏಪ್ರಿಲ್ 2020, 2:02 IST
Last Updated 5 ಏಪ್ರಿಲ್ 2020, 2:02 IST
ಅಸ್ಲಾಂ ಫಾರೂಖಿ
ಅಸ್ಲಾಂ ಫಾರೂಖಿ   

ಕಾಬೂಲ್: ಆಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಗುರುದ್ವಾರದಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿಯ ಪ್ರಮುಖ ಸಂಚುಕೋರನನ್ನು ಶನಿವಾರ ಬಂಧಿಸಲಾಗಿದೆ. ಬಂಧಿತ ಉಗ್ರ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯ ಖೊರಾಸನ್ ಪ್ರಾಂತ್ಯದ ನಾಯಕ ಅಸ್ಲಾಂ ಫಾರೂಖಿ ಎನ್ನಲಾಗಿದೆ.

ಬಂಧಿತನ ಪೂರ್ತಿ ಹೆಸರು ಫಾರೂಖಿ ಅಕಾ ಮಲ್‌ವಾಯಿ ಅಬ್ದುಲ್ಲಾ ಎಂದಾಗಿದ್ದು, ಈತ ಪಾಕಿಸ್ತಾನದವ. ಈ ಹಿಂದೆ ಲಷ್ಕರ್ ಎ ತೊಯ್ಬಾ, ತೆಹ್ರೀಕ್ ಇ ತಾಲೀಬಾನ್ ಉಗ್ರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. 2019ರ ಏಪ್ರಿಲ್‌ನಿಂದ ಐಎಸ್ ಉಗ್ರ ಸಂಘಟನೆಯ ಖೊರಾಸನ್ ಪ್ರಾಂತ್ಯದ ನಾಯಕನಾಗಿ ಗುರುತಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಾಬೂಲ್‌ನ ಹೃದಯಭಾಗವಾದ ಶೋರ್‌ ಬಜಾರ್‌ ಪ್ರದೇಶದಲ್ಲಿರುವ ಗುರುದ್ವಾರದ ಮೇಲೆ ನಡೆದಿದ್ದ ಮಾರ್ಚ್‌ 25ರಂದು ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ 25 ಜನ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ದಾಳಿ ವೇಳೆ ಗುರುದ್ವಾರದಲ್ಲಿ 150ಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ADVERTISEMENT

ದಾಳಿ ನಡೆಸಿದ್ದ ನಾಲ್ವರು ಉಗ್ರರಲ್ಲೊಬ್ಬ ಕೇರಳದ ಕಾಸರಗೋಡಿನವ ಎಂಬುದು ಬಳಿಕ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.