ಇಸ್ರೇಲ್‌ನ ಯುದ್ಧ ಟ್ಯಾಂಕ್
ರಾಯಿಟರ್ಸ್ ಚಿತ್ರ
ಟೆಲ್ ಅವೀವ್: ಗಾಜಾ ನಗರವನ್ನೇ ಗುರಿಯಾಗಿಸಿ ಮುಂದಿನ ಹಂತದ ಸೇನಾ ಕಾರ್ಯಾಚರಣೆ ನಡೆಸಲು ಇಸ್ರೇಲ್ ಸಿದ್ಧತೆ ನಡೆಸಿದೆ.
ಈ ಕುರಿತು ಇಸ್ರೇಲ್ ಸೇನಾ ಮುಖ್ಯಸ್ಥರು ಅಲ್ಲಿನ ಸಂಸತ್ತಿನ ಅನುಮೋದನೆಯನ್ನು ಬುಧವಾರ ಪಡೆದಿದ್ದಾರೆ ಎಂದು ವರದಿಯಾಗಿದೆ.
22 ತಿಂಗಳ ಯುದ್ಧದ ಬಳಿಕ ಪ್ಯಾಲೆಸ್ಟೀನ್‌ನ ಅತಿ ದೊಡ್ಡ ನಗರವನ್ನು ವಶಕ್ಕೆ ಪಡೆಯುವ ಪ್ರಸ್ತಾವವನ್ನು ಇಸ್ರೇಲ್‌ನ ಭದ್ರತಾ ಸಚಿವಾಲಯವು ಮಂಗಳವಾರ ಮುಂದಿಟ್ಟಿತ್ತು. ಇದಾಗಿ ಒಂದು ದಿನದ ನಂತರ ಸಂಸತ್ತು ಸೇನೆಗೆ ಅನುಮೋದನೆ ನೀಡಿದೆ.
‘ಗಾಜಾ ಪಟ್ಟಿಯಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆಯ ನೀಲನಕ್ಷೆಗೆ ಅನುಮೋದನೆ ದೊರೆತಿದೆ’ ಎಂದು ಇಸ್ರೇಲ್‌ನ ಸಶಸ್ತ್ರ ದಳದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಯಾಲ್ ಜಮೀರ್ ಹೇಳಿದ್ದಾರೆ.
ಇದಕ್ಕೆ ನಿರ್ದಿಷ್ಟ ವೇಳಾಪಟ್ಟಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿಲ್ಲ. ಇಸ್ರೇಲ್ ಈ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಹಲವರು ಮೃತಪಟ್ಟು, ಸಾಕಷ್ಟು ಜನ ನಿರ್ವಸತಿಗರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.