ಗಾಜಾ ನಗರ: ಗಾಜಾ ಪಟ್ಟಿಯ ಗಾಜಾ ಸಿಟಿಯನ್ನು ‘ಅಪಾಯಕಾರಿ ಯುದ್ಧ ವಲಯ’ ಎಂದು ಇಸ್ರೇಲ್ ಶುಕ್ರವಾರ ಘೋಷಿಸಿದೆ. ಈ ನಗರಕ್ಕೆ ಸರಬರಾಜು ಆಗುತ್ತಿದ್ದ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸೇನೆ ತಡೆದಿದೆ.
ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಗಾಗಿ ಇಸ್ರೇಲ್ ಸೇನೆಯು ಯುದ್ಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. 2023ರ ಅ.7ರಂದು ಹಮಾಸ್ ಬಂಡುಕೋರರು ಕರೆದೊಯ್ದಿದ್ದ ಇಸ್ರೇಲ್ ನಾಗರಿಕರ ಮೃತದೇಹಗಳ ಇಲ್ಲಿ ದೊರೆತವು ಎಂದು ಆರೋಪಿಸಿ ಯುದ್ಧಕ್ಕೆ ನೀಡಿದ್ದ ತಡೆಯ ಆದೇಶವನ್ನು ಸೇನೆ ವಾಪಸು ಪಡೆಯಿತು.
ಈ ಬೆಳವಣಿಗೆ ಬಳಿಕ ಪ್ರತಿಕ್ರಿಯಿಸಿದರುವ ಇಸ್ರೇಲ್ ಸೇನೆಯ ವಕ್ತಾರ, ‘ನಾವು ನಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಹಮಾಸ್ ಅಪಹರಿಸಿರುವ ನಮ್ಮ ಒತ್ತೆಯಾಳುಗಳನ್ನು ವಾಪಾಸು ತರುತ್ತೇವೆ. ಹಮಾಸ್ ಅನ್ನು ಅಳಿಸಿ ಹಾಕುತ್ತೇವೆ’ ಎಂದಿದ್ದಾರೆ.
ಒತ್ತೆಯಾಳುಗಳ ಶವ ವಶಕ್ಕೆ: ಗಾಜಾ ನಗರದ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್ ಸೇನೆ, ಹಮಾಸ್ ವಶದಲ್ಲಿದ್ದ ಇಬ್ಬರು ಇಸ್ರೇಲಿ ಒತ್ತೆಯಾಳುಗಳ ಶವವನ್ನು ವಶಪಡಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.