ADVERTISEMENT

ಏಳು ದಿನಗಳ ಕದನ ವಿರಾಮ ಅಂತ್ಯ: ಗಾಜಾದಲ್ಲಿ ದಾಳಿ ಮುಂದುವರಿಸಿದ ಇಸ್ರೇಲ್‌

ರಾಯಿಟರ್ಸ್
Published 1 ಡಿಸೆಂಬರ್ 2023, 6:26 IST
Last Updated 1 ಡಿಸೆಂಬರ್ 2023, 6:26 IST
<div class="paragraphs"><p>ಕದನ ವಿರಾಮ&nbsp; ಅಂತ್ಯಗೊಂಡ ಬೆನ್ನಲೆ&nbsp;ಇಸ್ರೇಲಿ ಸೈನಿಕರು ಗಾಜಾ ಪಟ್ಟಿಯಲ್ಲಿ ದಾಳಿ ನಡೆಸಲು ಸಜ್ಜಾಗಿರುವುದು</p></div>

ಕದನ ವಿರಾಮ  ಅಂತ್ಯಗೊಂಡ ಬೆನ್ನಲೆ ಇಸ್ರೇಲಿ ಸೈನಿಕರು ಗಾಜಾ ಪಟ್ಟಿಯಲ್ಲಿ ದಾಳಿ ನಡೆಸಲು ಸಜ್ಜಾಗಿರುವುದು

   

ರಾಯಿಟರ್ಸ್‌ ಚಿತ್ರ

ಗಾಜಾ: ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೆ ಗಾಜಾದಲ್ಲಿ ಇಸ್ರೇಲ್‌ ಪಡೆ ದಾಳಿ ಆರಂಭಿಸಿದೆ.

ADVERTISEMENT

ಇಸ್ರೇಲ್ ಭೂ ಪ್ರದೇಶದ ಕಡೆಗೆ ಗುಂಡು ಹಾರಿಸುವ ಮೂಲಕ ಪ್ಯಾಲೆಸ್ಟೀನ್‌ ಬಂಡುಕೋರರ ಗುಂಪು ತಾತ್ಕಾಲಿಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್‌ ಸೇನೆ ಹಮಾಸ್ ವಿರುದ್ಧ ಗಾಜಾದಲ್ಲಿ ಯುದ್ಧ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. 

ಏಳು ದಿನಗಳ ಕದನ ವಿರಾಮ ಮುಗಿಯುವ ಒಂದು ಗಂಟೆಯ ಮೊದಲು, ಗಾಜಾದಿಂದ ಹಾರಿಸಲಾದ ರಾಕೆಟ್ ಅನ್ನು ತಡೆಯಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅಲ್ಲದೆ ಗಾಜಾ ಬಳಿಯ ಇಸ್ರೇಲಿ ಪ್ರದೇಶದಲ್ಲಿ ರಾಕೆಟ್‌ ದಾಳಿಯ ಎಚ್ಚರಿಕೆಯ ಸೈರನ್‌ಗಳು ಸದ್ದು ಮಾಡಿವೆ ಎಂದು ಇಸ್ರೇಲ್‌ ಮಿಲಿಟರಿ ಪಡೆ ಹೇಳಿದೆ.

ಆದರೆ ದಾಳಿಯ ಬಗ್ಗೆ ಹಮಾಸ್‌ ಹೊಣೆ ಹೊತ್ತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ತಿಳಿಸಿದೆ.

ಇತ್ತ, ಪ್ಯಾಲೆಸ್ಟೀನ್‌ ಮಾಧ್ಯಮಗಳು ಕದನ ವಿರಾಮದ ನಂತರ ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾ ಗಡಿ ಸೇರಿದಂತೆ ಹಲವೆಡೆ ಇಸ್ರೇಲ್‌ ಸೇನೆ ವಾಯು ಮತ್ತು ಫಿರಂಗಿ ದಾಳಿ ನಡೆಸಿದೆ ಎಂದು ವರದಿ ಮಾಡಿದೆ.

ಮೊದಲು 4 ದಿನ ಕದನ ವಿರಾಮಕ್ಕೆ ಅನುಮತಿ ನೀಡಲಾಗಿತ್ತು. ಬಳಿಕ ರಾಜತಾಂತ್ರಿಕ ಸಲಹೆಯ ಮೇಲೆ ಹಮಾಸ್‌ ಮತ್ತು ಇಸ್ರೇಲ್‌ 3 ದಿನಗಳ ಯುದ್ಧ ವಿರಾಮ ಘೋಷಣೆ ಮಾಡಿತ್ತು. ಅದು ಇಂದಿಗೆ (ಶುಕ್ರವಾರ) ಮುಕ್ತಾಯವಾಗಿದೆ. ಈ ಸಮಯದಲ್ಲಿ ಈವರೆಗೆ 110ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.