
ದೀರ್ ಅಲ್–ಬಲಾಹ್: ಪ್ಯಾಲೆಸ್ಟೀನಿಯರ 15 ಶವಗಳನ್ನು ಇಸ್ರೇಲ್ ಹಸ್ತಾಂತರಿಸಿದೆ. ಇದರೊಂದಿಗೆ ಈವರೆಗೆ ಇಸ್ರೇಲ್ ಹಸ್ತಾಂತರಿಸಿದ ಪ್ಯಾಲೆಸ್ಟೀನಿಯರ ಶವಗಳ ಸಂಖ್ಯೆ 285ಕ್ಕೆ ಏರಿಕೆಯಾಗಿದೆ ಎಂದು ಗಾಜಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.
ಹಮಾಸ್ ಬಂಡುಕೋರರು ತಾವು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಸ್ರೇಲ್ ಸೈನಿಕನ ಶವವನ್ನು ಹಸ್ತಾಂತರಿಸಿದ ಬಳಿಕ, ಪ್ಯಾಲೆಸ್ಟೀನಿಯರ ಶವವನ್ನು ಇಸ್ರೇಲ್ ಹಸ್ತಾಂತರಿಸಿದೆ.
ಅ.10ರಂದು ಕದನ ವಿರಾಮ ಘೋಷಣೆಯಾದಾಗಿನಿಂದ ಈವರೆಗೆ 21 ಮಂದಿಯ ಶವಗಳ ಅವಶೇಷಗಳನ್ನು ಹಮಾಸ್ ಇಸ್ರೇಲ್‌ಗೆ ಹಸ್ತಾಂತರ ಮಾಡಿದೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಬಂಡುಕೋರರು ಸುಮಾರು 30 ಮಕ್ಕಳು ಸೇರಿದಂತೆ 251ಜನರನ್ನು ಅಪಹರಿಸಿದ್ದರು ಮತ್ತು 1,200ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದರು. ಬಳಿಕ ಪ್ಯಾಲೆಸ್ಟೀನ್ ವಿರುದ್ಧ ಇಸ್ರೇಲ್ ಆರಂಭಿಸಿದ ತೀವ್ರ ಮಿಲಿಟರಿ ದಾಳಿಯಲ್ಲಿ ಈವೆರೆಗೆ 68,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.