ಜೆರುಸಲೇಂ: ‘ಗಾಜಾಪಟ್ಟಿ, ಲೆಬನಾನ್ ಮತ್ತು ಸಿರಿಯಾದ ಭದ್ರತಾ ವಲಯಗಳು ಎಂದು ಕರೆಯಲಾಗುವ ಪ್ರದೇಶಗಳಲ್ಲಿ ನಮ್ಮ ಸೇನೆಯು ಅನಿರ್ದಿಷ್ಟಾವಧಿವರೆಗೆ ಇರಲಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ಬುಧವಾರ ಹೇಳಿದ್ದಾರೆ.
‘ತೆರವುಗೊಳಿಸಿದ ಅಥವಾ ವಶಪಡಿಸಿಕೊಂಡ ಸ್ಥಳಗಳಿಂದ ಸೇನೆಯು ಹೋಗುವುದಿಲ್ಲ. ಗಾಜಾ, ಲೆಬನಾನ್ ಮತ್ತು ಸಿರಿಯಾದಲ್ಲಿ ಯಾವುದೇ ತಾತ್ಕಾಲಿಕ ಮತ್ತು ಶಾಶ್ವತ ಪರಿಸ್ಥಿತಿಗಳಲ್ಲಿ ಸೇನೆಯು, ಶತ್ರುಗಳು ಮತ್ತು ಇಸ್ರೇಲ್ ಸಮುದಾಯದ ನಡುವೆ ಗೋಡೆಯಾಗಿ ನಿಲ್ಲಲಿದೆ’ ಎಂದು ಅವರು ತಿಳಿಸಿದ್ದಾರೆ.
‘2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದಂತಹ ದಾಳಿ ಪುನರಾವರ್ತನೆಯಾಗದಂತೆ ತಡೆಯಲು ಭದ್ರತಾ ವಲಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.