ADVERTISEMENT

ಗಾಜಾ ನಗರದ ಮೇಲೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಇಸ್ರೇಲ್‌ ವೈಮಾನಿಕ ದಾಳಿ

ಏಜೆನ್ಸೀಸ್
Published 16 ಮೇ 2021, 5:36 IST
Last Updated 16 ಮೇ 2021, 5:36 IST
ಗಾಜಾ ನಗರದಲ್ಲಿರುವ ಹಮಸ್‌ ಸಂಘಟನೆಗೆ ಸೇರಿದ ಕಟ್ಟಡದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ –ಎಎಫ್‌ಪಿ ಚಿತ್ರ
ಗಾಜಾ ನಗರದಲ್ಲಿರುವ ಹಮಸ್‌ ಸಂಘಟನೆಗೆ ಸೇರಿದ ಕಟ್ಟಡದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ –ಎಎಫ್‌ಪಿ ಚಿತ್ರ   

ಗಾಜಾ ನಗರ: ಗಾಜಾ ನಗರದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ಮುಂದುವರಿಸಿದೆ. ಭಾನುವಾರ ಬೆಳಿಗ್ಗೆ ಇಸ್ರೇಲ್‌ನ ಯುದ್ಧವಿಮಾನಗಳು ನಡೆಸಿದ ದಾಳಿಯಲ್ಲಿ ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ರಸ್ತೆಗಳು ಹಾಳಾಗಿವೆ.

ಎರಡು ಗಂಟೆಗಳಿಗೂ ಹೆಚ್ಚು ಅವಧಿಗೆ ದಾಳಿ ನಡೆದಿದ್ದು, ಈ ಬಗ್ಗೆ ಇಸ್ರೇಲ್‌ ಮಿಲಿಟರಿಯಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಹೊರ ಬಿದ್ದಿಲ್ಲ.

ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿ 25 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ.

ADVERTISEMENT

ಕಟ್ಟಡಗಳು, ರಸ್ತೆಗಳು ಹಾನಿಯಾಗಿರುವ ಚಿತ್ರಗಳನ್ನು ಗಾಜಾ ನಿವಾಸಿಗಳು, ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವೈಮಾನಿಕ ದಾಳಿಯಿಂದಾಗಿ ನಗರದ ಮುಖ್ಯರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿ, ನಗರದ ಬೃಹತ್‌ ಆಸ್ಪತ್ರೆಯಾಗಿರುವ ಶಿಫಾಕ್ಕೆ ಸಂಪರ್ಕ ಕಡಿದು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.