ADVERTISEMENT

ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಪತ್ರಕರ್ತ ಸಾವು 

ರಾಯಿಟರ್ಸ್
Published 13 ಮೇ 2025, 15:56 IST
Last Updated 13 ಮೇ 2025, 15:56 IST
ಹಸನ್‌ ಅಸ್ಲಿಹ್‌ಗೆ ಪ್ಯಾಲೆಸ್ಟೀನ್‌ ಪತ್ರಕರ್ತರು ಅಂತಿಮ ನಮನ ಸಲ್ಲಿಸಿದರು
ಹಸನ್‌ ಅಸ್ಲಿಹ್‌ಗೆ ಪ್ಯಾಲೆಸ್ಟೀನ್‌ ಪತ್ರಕರ್ತರು ಅಂತಿಮ ನಮನ ಸಲ್ಲಿಸಿದರು   

ಕೈರೊ/ಗಾಜಾ: ಗಾಜಾಪಟ್ಟಿಯ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್‌ ಮಂಗಳವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ಟೀನ್‌ನ ಪತ್ರಕರ್ತ ಹಸನ್ ಅಸ್ಲಿಹ್‌ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಹಮಾಸ್‌ ಪರವಾಗಿ ಅಸ್ಲಿಹ್‌ ಕಾರ್ಯನಿರ್ವಹಿಸುತ್ತಿದ್ದರು ಎಂದು ಈ ಹಿಂದೆ ಇಸ್ರೇಲ್‌ ಪಡೆಗಳು ಆರೋಪಿಸಿದ್ದವು.

ಕಳೆದ ತಿಂಗಳು ಇಸ್ರೇಲ್‌ ನಡೆಸಿದ್ದ ದಾಳಿಯಲ್ಲಿ ಗಾಯಗೊಂಡಿದ್ದ ಅಸ್ಲಿಹ್‌, ಖಾನ್‌ ಯೂನಿಸ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅದೇ ಆಸ್ಪತ್ರೆಯ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಪರಿಣಾಮ ಅಸ್ಲಿಹ್‌ ಜತೆಗೆ ಮತ್ತೊಬ್ಬ ವ್ಯಕ್ತಿಯೂ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಜಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಅಸ್ಲಿಹ್‌ ಅವರು ಆಲಂ 24 ನ್ಯೂಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಯುದ್ಧ ಆರಂಭವಾದ ಬಳಿಕ ಗಾಜಾದಲ್ಲಿ ಈವರೆಗೆ 160 ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.