ADVERTISEMENT

ಗಾಜಾ ಮೇಲಿನ ಇಸ್ರೇಲ್‌ ವೈಮಾನಿಕ ದಾಳಿ ಮತ್ತಷ್ಟು ತೀವ್ರ: ಏಳು ಮಂದಿ ಸಾವು

ಏಜೆನ್ಸೀಸ್
Published 15 ಮೇ 2021, 8:57 IST
Last Updated 15 ಮೇ 2021, 8:57 IST
ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ವೇಳೆ ಭುಗಿಲೆದ್ದ ಬೆಂಕಿ –ಎಎಫ್‌ಪಿ ಚಿತ್ರ
ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ವೇಳೆ ಭುಗಿಲೆದ್ದ ಬೆಂಕಿ –ಎಎಫ್‌ಪಿ ಚಿತ್ರ   

ಗಾಜಾ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ ನಡುವೆ ಯುದ್ಧದ ಕಾರ್ಮೋಡ ಮುಂದುವರಿದಿದ್ದು, ಗಾಜಾ ಪಟ್ಟಿಯನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಏಳು ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ.

ಹಮಸ್‌ ಸಂಘಟನೆಯೊಂದಿಗೆ ಈ ವಾರದ ಆರಂಭದಲ್ಲಿ ಭುಗಿಲೆದ್ದ ಸಂಘರ್ಷದಲ್ಲಿ ಭಾರೀ ಸಾವು ನೋವಿಗೆ ಕಾರಣವಾಗಿದೆ. ಈಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ.

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ಸತತ ದಾಳಿ ನಡೆಸುತ್ತಿದೆ. ಇನ್ನೊಂದೆಡೆ, ಇಸ್ರೇಲ್‌ನಲ್ಲಿ ಅರಬರು ಮತ್ತು ಯಹೂದಿಗಳು ಸಂಘರ್ಷಕ್ಕೆ ಇಳಿದಿದ್ದಾರೆ.

ADVERTISEMENT

ಸೋಮವಾರದಿಂದ ಈಚೆಗೆ ಆರಂಭವಾದ ಇಸ್ರೇಲ್‌ ದಾಳಿಗಳಿಂದ 31 ಮಕ್ಕಳು, 20 ಮಹಿಳೆಯರ ಸಹಿತ 126 ಮಂದಿ ಪ್ಯಾಲೆಸ್ಟೀನ್‌ ನಾಗರಿಕರು ಮೃತಪಟ್ಟಿದ್ದಾರೆ. ಹಮಸ್‌ ನಡೆಸಿದ ದಾಳಿಗಳಲ್ಲಿ ಇಸ್ರೇಲ್‌ನಲ್ಲಿ 6 ವರ್ಷದ ಬಾಲಕ ಸಹಿತ 7 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.