ADVERTISEMENT

ಗಾಜಾದಲ್ಲಿ ಇಸ್ರೇಲ್ ವಾಯುದಾಳಿ: ಮಾನವೀಯ ನೆರವು ನೀಡಲು ಹೋಗಿದ್ದ 7 ಜನ ಸಾವು

ಗಾಜಾದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಗೆ ಮಾನವೀಯ ನೆರವು ನೀಡಲು ಹೋಗಿದ್ದ ‘ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌’ನ ಏಳು ಸ್ವಯಂಸೇವಕರು ಮೃತಪಟ್ಟಿದ್ದಾರೆ.

ಏಜೆನ್ಸೀಸ್
Published 3 ಏಪ್ರಿಲ್ 2024, 3:00 IST
Last Updated 3 ಏಪ್ರಿಲ್ 2024, 3:00 IST
<div class="paragraphs"><p>ಘಟನೆಯಲ್ಲಿ ಮೃತಪಟ್ಟ&nbsp;‘ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌’ ಮಹಿಳೆ</p></div>

ಘಟನೆಯಲ್ಲಿ ಮೃತಪಟ್ಟ ‘ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌’ ಮಹಿಳೆ

   

ರಾಯಿಟರ್ಸ್ ಚಿತ್ರ

ಜೇರುಸಲೇಂ: ಗಾಜಾದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಗೆ ಮಾನವೀಯ ನೆರವು ನೀಡಲು ಹೋಗಿದ್ದ ‘ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌’ನ ಏಳು ಸ್ವಯಂಸೇವಕರು ಮೃತಪಟ್ಟಿದ್ದಾರೆ.

ADVERTISEMENT

ಕೇಂದ್ರ ಗಾಜಾದ ಡೇರ್ ಅಲ್ ಬಲ್ಲಾ ಎಂಬಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೃತರಲ್ಲಿ ಅಮೆರಿಕ, ಕೆನಡಾದ ಇಬ್ಬರು ಸೇರಿದ್ದಾರೆ.

ಟ್ರಸ್ಟ್‌ನಿಂದ ಬಂದಿದ್ದ ಸುಮಾರು 100 ಟನ್ ಆಹಾರ ಸಾಮಗ್ರಿಗಳನ್ನು ಸ್ವಯಂಸೇವಕರು ಟ್ರಕ್‌ಗಳಲ್ಲಿ ಉಗ್ರಾಣಕ್ಕೆ ಸಾಗಿಸುತ್ತಿದ್ದರು. ಈ ವೇಳೆ ವಾಹನಗಳನ್ನು ಗುರಿಯಾಗಿಸಿ ಇಸ್ರೇಲ್ ವಾಯುದಾಳಿ ನಡೆಸಿತ್ತು.

ಆಕಸ್ಮಿಕವಾಗಿ ನಡೆದ ಘಟನೆಯಿಂದ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ಬಗ್ಗೆ ಇಸ್ರೇಲ್ ಆಂತರಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜ್‌ಮಿನ್ ನೇತನ್ಯಾಹು ಹೇಳಿದ್ದಾರೆ.

ಇದು ನಮ್ಮ ಕಡೆಯಿಂದ ತಪ್ಪಾಗಿ ನಡೆದ ದಾಳಿಯೆಂದು ಇಸ್ರೇಲ್ ಮಿಲಿಟರಿ ಸ್ಪಷ್ಟನೆ ಕೊಟ್ಟಿದೆ.

ಮಾನವೀಯ ನೆರವು ನೀಡಲು ಹೋಗಿದ್ದ ಅಮಾಯಕರ ಹತ್ಯೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.