ADVERTISEMENT

ಶಿಫಾ ಆಸ್ಪತ್ರೆಯಿಂದ ಇಸ್ರೇಲ್‌ ಸೇನೆ ವಾಪಸ್‌

ಏಜೆನ್ಸೀಸ್
Published 1 ಏಪ್ರಿಲ್ 2024, 14:58 IST
Last Updated 1 ಏಪ್ರಿಲ್ 2024, 14:58 IST
<div class="paragraphs"><p>.</p></div>

.

   

ದೇರ್‌ ಅಲ್‌ ಬಲಾಹ್‌ (ಗಾಜಾ ಪಟ್ಟಿ): ‘ಗಾಜಾದ ಶಿಫಾ ಆಸ್ಪತ್ರೆಯಲ್ಲಿ ನಿಯೋಜಿಸಿದ್ದ ತನ್ನ ಯೋಧರನ್ನು ಇಸ್ರೇಲ್‌ ಸೋಮವಾರ ಹಿಂದಕ್ಕೆ ಕರೆಯಿಸಿಕೊಂಡಿದೆ’ ಎಂದು ಪ್ಯಾಲೆಸ್ಟೀನ್‌ ನಾಗರಿಕರು ತಿಳಿಸಿದ್ದಾರೆ.

‘ಕಳೆದ ಎರಡು ವಾರಗಳಿಂದ ಇಸ್ರೇಲ್‌ ಸೇನೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, ಅನೇಕರನ್ನು ಹತ್ಯೆ ಮಾಡಿದೆ’ ಎಂದೂ ಅವರು ದೂರಿದ್ದಾರೆ.

ADVERTISEMENT

‘ಕಳೆದ ಆರು ತಿಂಗಳ ಯುದ್ಧದಲ್ಲಿ ಶಿಫಾ ಆಸ್ಪತ್ರೆ ಮೇಲೆ ನಡೆಸಿದ ದಾಳಿ ನಮ್ಮ ಅತ್ಯಂತ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಈ ದಾಳಿಯ ಸಂದರ್ಭದಲ್ಲಿ ಹಮಾಸ್‌ ಮತ್ತು ಇತರ ಸಂಘಟನೆಗಳ ಉಗ್ರರನ್ನು ಕೊಂದಿದ್ದೇವೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

‘ಹಮಾಸ್‌ ಮತ್ತು ಇಸ್ಲಾಮಿಕ್‌ ಜಿಹಾದ್‌ ಉಗ್ರ ಸಂಘಟನೆಗಳು ಆಸ್ಪತ್ರೆಯಲ್ಲೇ ತಮ್ಮ ಉತ್ತರ ಭಾಗದ ಮುಖ್ಯ ಕಚೇರಿಯನ್ನು ಸ್ಥಾಪಿಸಿದ್ದವು. ಆಸ್ಪತ್ರೆಯಲ್ಲಿ ನಡೆದ ವಿನಾಶಕ್ಕೆ ಹಮಾಸ್‌ ಉಗ್ರರೇ ಕಾರಣ’ ಎಂದು ಸೇನೆಯ ವಕ್ತಾರ ರೇರ್‌ ಅಡ್ಮಿರಲ್‌ ಡೇನಿಯಲ್‌ ಹಗಾರಿ ಅವರು ತಿಳಿಸಿದ್ದಾರೆ.

‘ದಾಳಿ ವೇಳೆ ನಮ್ಮ ಯೋಧರು 900 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಜತೆಗೆ, ವಿವಿಧ ಕರೆನ್ಸಿಯ 30 ಲಕ್ಷ ಅಮೆರಿಕನ್‌ ಡಾಲರ್‌ ಮತ್ತು ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಆಸ್ಪತ್ರೆಯಲ್ಲಿದ್ದ ಅಂದಾಜು 300ರಿಂದ 350 ರೋಗಿಗಳ ಪೈಕಿ 200ಕ್ಕೂ ಹೆಚ್ಚು ರೋಗಿಗಳನ್ನು ಸ್ಥಳಾಂತರಿಸಿ ಅವರಿಗೆ ಆಹಾರ ಒದಗಿಸಲಾಗಿತ್ತು. ಅಲ್ಲದೇ ವೈದ್ಯಕೀಯ ನೆರವಿನ ವ್ಯವಸ್ಥೆಯನ್ನು ಮಾಡಲಾಗಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆಸ್ಪತ್ರೆಯ ಮೇಲಿನ ದಾಳಿ ಸಂದರ್ಭದಲ್ಲಿ ಅನೇಕ ರೋಗಿಗಳು ಸಾವಿಗೀಡಾಗಿದ್ದಾರೆ. ಅಲ್ಲದೇ ಅನೇಕರ ಜೀವವೂ ತೊಂದರೆಗೆ ಸಿಲುಕಿತ್ತು’ ಎಂದು ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.