ADVERTISEMENT

ಫಿಲಿಪೀನ್ಸ್‌ ಸಚಿವರ ಜತೆ ಎಸ್‌. ಜೈಶಂಕರ್‌ ದ್ವಿಪಕ್ಷೀಯ ಮಾತುಕತೆ

ಪಿಟಿಐ
Published 14 ಫೆಬ್ರುವರಿ 2022, 12:27 IST
Last Updated 14 ಫೆಬ್ರುವರಿ 2022, 12:27 IST
ಫಿಲಿಪೀನ್ಸ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜಯಶಂಕರ್‌ ಅವರು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಟಿಯೊಡೊರೊ ಎಲ್‌ ಲೊಕ್ಸಿನ್‌ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದರು
ಫಿಲಿಪೀನ್ಸ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜಯಶಂಕರ್‌ ಅವರು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಟಿಯೊಡೊರೊ ಎಲ್‌ ಲೊಕ್ಸಿನ್‌ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದರು   

ಮನಿಲಾ: ಫಿಲಿಪೀನ್ಸ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಇಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಟಿಯೊಡೊರೊ ಎಲ್‌ ಲೊಕ್ಸಿನ್‌ ಅವರೊಂದಿಗೆ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಸಿ, ರಾಷ್ಟ್ರೀಯ ಭದ್ರತೆ ಮತ್ತು ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು.

ಹಣಕಾಸು ಸಚಿವರೂ ಆಗಿರುವ ಲೊಕ್ಸಿನ್‌ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಜೈಶಂಕರ್‌, ಪರಸ್ಪರ ಎರಡೂ ದೇಶಗಳು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಅಭಿವೃದ್ಧಿಗೆ ಪೂರಕವಾತಾವರಣವನ್ನು ಬಲಪಡಿಸಲು ಹಾಗೂ ನಿಭಾಯಿಸುವಉದ್ದೇಶದಿಂದ ಹೊಸ ಹಂತದಪಾಲುದಾರಿಕೆಯತ್ತ ಹೆಜ್ಜೆಇರಿಸಿವೆ ಎಂದು ತಿಳಿಸಿದರು.

ಕಳೆದ ವಾರ ಫಿಲಿಫೀನ್ಸ್‌ ಭಾರತದಿಂದ ಬ್ರಹ್ಮೋಸ್‌ ಕ್ಷಿಪಣಿಯ ಬ್ಯಾಟರಿಗಳ ಖರೀದಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.