ADVERTISEMENT

ಜಪಾನ್‌: 2 ವರ್ಷದ ಬಳಿಕ ಮೂವರಿಗೆ ಗಲ್ಲು ಶಿಕ್ಷೆ ಜಾರಿ

ಏಜೆನ್ಸೀಸ್
Published 21 ಡಿಸೆಂಬರ್ 2021, 12:25 IST
Last Updated 21 ಡಿಸೆಂಬರ್ 2021, 12:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೋಕಿಯೊ: ಜಪಾನ್‌ನಲ್ಲಿ ಮಂಗಳವಾರ ಮೂವರು ಕೈದಿಗಳನ್ನು ಗಲ್ಲಿಗೇರಿಸಲಾಗಿದೆ. ಗಲ್ಲುಶಿಕ್ಷೆ ಜಾರಿ ವಿರುದ್ಧ ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ವಿರೋಧ, ಟೀಕೆ ವ್ಯಕ್ತ ಆಗುತ್ತಿರುವುದರ ನಡುವೆಯೂ ಎರಡು ವರ್ಷಗಳಲ್ಲಿ ಇದೇ ಮೊದಲಿಗೆ ಶಿಕ್ಷೆ ಜಾರಿಗೊಂಡಿದೆ.

ಗಲ್ಲುಶಿಕ್ಷೆಗೆ ಗುರಿಯಾದವರಲ್ಲಿ ಯಸುಟಕ ಫುಜಿಶಿರೊ 2004ರಲ್ಲಿ ಏಳುಮಂದಿಯನ್ನು ಕೊಲೆ ಮಾಡಿ, ಅವರ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಉಳಿದ ಇಬ್ಬರಾದ ಟೊಮೊಕಿ, ಮಿಟ್‌ಸುನೊರಿ 2003ರಲ್ಲಿ ಇಬ್ಬರು ಪಾರ್ಲರ್ ನೌಕರರನ್ನು ಕೊಲೆ ಮಾಡಿದ್ದರು.

ಅತ್ಯಂತ ಗೋಪ್ಯವಾಗಿ ಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಅಂತಿಮ ಹೊತ್ತಿನವರೆಗೂ ಕೈದಿಗಳಿಗೂ ಈ ಕುರಿತು ಮಾಹಿತಿಯನ್ನು ನೀಡಲಾಗಿರಲಿಲ್ಲ.

ADVERTISEMENT

ಕಾನೂನು ಸಚಿವ ಯೊಶಿಹಿಸಾ ಫುರುಕಾವಾ ಅವರು, ‘ಮೂವರು ಗಂಭೀರ ಮತ್ತು ಭೀಕರವಾದ ಅಪರಾಧ ಎಸಗಿದ್ದರು. ಶಿಕ್ಷೆ ಸೂಕ್ತವಾದುದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇವರ ಪ್ರಕರಣಗಳನ್ನು ಮತ್ತೆ, ಮತ್ತೆ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ’ ಎಂದೂ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.