ADVERTISEMENT

ಏಳು ವರ್ಷಗಳ ಬಳಿಕ ’ವಿಕಿಲೀಕ್ಸ್‌’ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಬಂಧನ

ಲಂಡನ್‌

ಏಜೆನ್ಸೀಸ್
Published 11 ಏಪ್ರಿಲ್ 2019, 11:20 IST
Last Updated 11 ಏಪ್ರಿಲ್ 2019, 11:20 IST
   

ಲಂಡನ್‌: ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್(47) ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಗುರುವಾರ ಅವರನ್ನು ಬ್ರಿಟಿಷ್‌ ಪೊಲೀಸರು ಬಂಧಿಸಿದ್ದಾರೆ.

ಏಳು ವರ್ಷಗಳ ಬಳಿಕ ಬ್ರಿಟಿಷ್‌ ಪೊಲೀಸರು ಈಕ್ವೆಡಾರ್‌ ರಾಯಭಾರಿ ಕಚೇರಿಯಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ.

‘ಏಪ್ರಿಲ್‌ 11ರಂದು ಈಕ್ವೆಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ಜೂಲಿಯನ್‌ ಅಸಾಂಜ್ ಅವರನ್ನು ಮೆಟ್ರೊಪಾಲಿಟನ್‌ ಪೊಲೀಸ್‌ ಸರ್ವಿಸ್‌(ಎಂಪಿಎಸ್‌) ಅಧಿಕಾರಿಗಳು ಬಂಧಿಸಿರುವುದಾಗಿ’ ಪೊಲೀಸರು ಹೇಳಿದ್ದಾರೆ.

ADVERTISEMENT

ಬ್ರಿಟನ್‌ನಿಂದ ಬಂಧನ ಭೀತಿ ಎದುರಿಸುತ್ತಿದ್ದ ಜೂಲಿಯನ್‌ ಅಸಾಂಜ್ 2012ರಿಂದಲೂ ಸೆಂಟ್ರಲ್ ಲಂಡನ್‌ನಲ್ಲಿರುವ ಈಕ್ವೆಡಾರ್ ರಾಜತಾಂತ್ರಿಕ ಕಚೇರಿಯಲ್ಲಿ ರಕ್ಷಣೆ ಪಡೆದಿದ್ದರು.

'ಈಕ್ವೆಡಾರ್‌ ಸರ್ಕಾರ ಅಸಾಂಜ್ ನೀಡಿದ್ದ ಆಶ್ರಯವನ್ನು ಹಿಂಪಡೆದ ಬೆನ್ನಲೇ, ಈಕ್ವೆಡಾರ್‌ ರಾಯಭಾರಿಯು ರಾಜತಾಂತ್ರಿಕ ಕಚೇರಿಗೆ ಪೊಲೀಸರನ್ನು ಕರೆದಿದ್ದಾರೆ’ ಆ ಬಳಿಕ ಅಸಾಂಜ್ ಅವರನ್ನು ಬಂಧಿಸಿದ್ದಾರೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ವಿಕಿಲೀಕ್ಸ್ ಟ್ವಿಟರ್‌ ಸಹ ಇದನ್ನು ಸ್ಪಷ್ಟಪಡಿಸಿದೆ.

ಅಮೆರಿಕದ ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ವಿಶ್ವದ ಗಮನ ಸೆಳೆದಿದ್ದ ಅಸಾಂಜ್, ಅಮೆರಿಕದಿಂದಲೂ ಬಂಧನ ಭೀತಿ ಎದುರಿಸುತ್ತಿದ್ದಾರೆ. ‘ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿನ ಅಸಾಧಾರಣ ಸಾಹಸ’ಕ್ಕಾಗಿ ಅಸಾಂಜ್ ಅವರಿಗೆ 2011ರಲ್ಲಿ ಸಿಡ್ನಿ ಶಾಂತಿ ಪ್ರತಿಷ್ಠಾನದ ಪ್ರತಿಷ್ಠಿತ ಚಿನ್ನದ ಪದಕ ನೀಡಲಾಗಿತ್ತು.

ಸ್ವೀಡನ್‌ನ ಇಬ್ಬರು ಮಹಿಳೆಯರು ಅಸಾಂಜ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವನ್ನೂ ಮಾಡಿದ್ದರು. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.