ADVERTISEMENT

ಕಾಬೂಲ್‌ನಲ್ಲಿ ಎರಡು ಪ್ರಬಲ ಸ್ಫೋಟ; ಪಾಕಿಸ್ತಾನ ವಾಯುದಾಳಿ ನಡೆಸಿರುವ ಶಂಕೆ!

ಏಜೆನ್ಸೀಸ್
Published 10 ಅಕ್ಟೋಬರ್ 2025, 5:36 IST
Last Updated 10 ಅಕ್ಟೋಬರ್ 2025, 5:36 IST
<div class="paragraphs"><p>ಕಾಬೂಲ್ ನಗರ ಸ್ಪೋಟದ ಮುನ್ನ</p></div>

ಕಾಬೂಲ್ ನಗರ ಸ್ಪೋಟದ ಮುನ್ನ

   

ಎಕ್ಸ್ ಚಿತ್ರ

ಕಾಬೂಲ್: ಆಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಗುರುವಾರ ರಾತ್ರಿ ಎರಡು ಪ್ರಬಲ ಸ್ಫೋಟ ಸಂಭವಿಸಿದೆ. ಈ ಕುರಿತು ತನಿಖೆ ಆರಂಭಿಸಿರುವುದಾಗಿ ತಾಲಿಬಾನ್‌ ಸರ್ಕಾರದ ವಕ್ತಾರ ಹೇಳಿದ್ದಾರೆ.

ADVERTISEMENT

ಕಾಬೂಲ್‌ನ ಅಬ್ದುಲ್ ಹಕ್‌ ಚೌಕ ಬಳಿ ಸ್ಫೋಟ ಸಂಭವಿಸಿದೆ. ಈ ಪ್ರದೇಶದ ಸುತ್ತಲೇ ಕೆಲ ಸಚಿವರು ಮತ್ತು ರಾಷ್ಟ್ರದ ಗುಪ್ತಚರ ಇಲಾಖೆಯ ಕೇಂದ್ರವೂ ಇದೆ. ಈ ಪ್ರದೇಶವನ್ನು ಸುತ್ತುವರಿದಿರುವ ಭದ್ರತಾ ಸಿಬ್ಬಂದಿ ಪ್ರವೇಶ ನಿರ್ಬಂಧಿಸಿದ್ದಾರೆ. ಕಾಬೂಲ್‌ಗೆ ಹೊಂದಿಕೊಂಡಿರುವ ಶೇರ್‌ ಎ ನಾವ್‌ ಎಂಬ ಪ್ರದೇಶದಲ್ಲೂ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಫೋಟದಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಆಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಗಿ ಅವರು ಎರಡು ದಿನಗಳ ಭೇಟಿಯಾಗಿ ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿಳಿದಿದ್ದಾರೆ. ಸದ್ಯದ ಮಟ್ಟಿಗೆ ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರಗಳು ಇಸ್ಲಾಮಿಕ್ ರಾಷ್ಟ್ರವನ್ನು ಗುರುತಿಸಲ್ಲ. ಹೀಗಾಗಿ ಅಂತರರಾಷ್ಟ್ರೀಯ ಬೆಂಬಲ ಕೋರಲು ತಾಲಿಬಾನ್‌ ಮುಂದಡಿ ಇಟ್ಟಿದೆ ಎಂದೆನ್ನಲಾಗುತ್ತಿದೆ.

ತಾಲಿಬಾನ್ ವಿದೇಶಾಂಗ ಸಚಿವರ ಭಾರತ ಭೇಟಿ ಸಂದರ್ಭದಲ್ಲೇ ಕಾಬೂಲ್‌ನಲ್ಲಿ ಸ್ಫೋಟ ಸಂಭವಿಸಿರುವುದು ಪಾಕಿಸ್ತಾನದ ಕೈವಾಡ ಎಂದು ಹಲವು ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.