ADVERTISEMENT

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಒಪ್ಪಂದದಲ್ಲಿ ಪಾಕ್‌ಗೆ ಟಾಂಗ್ ಕೊಟ್ಟ ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 7:10 IST
Last Updated 7 ಫೆಬ್ರುವರಿ 2026, 7:10 IST
<div class="paragraphs"><p>'ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್' ಬಿಡುಗಡೆ ಮಾಡಿದ ಭಾರತದ ನಕ್ಷೆ</p></div>

'ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್' ಬಿಡುಗಡೆ ಮಾಡಿದ ಭಾರತದ ನಕ್ಷೆ

   

ಚಿತ್ರ ಕೃಪೆ/@USTradeRep

ನವದೆಹಲಿ: ಭಾರತ-ಅಮೆರಿಕ ನಡುವಣ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ವಿಶ್ವದ ದೊಡ್ಡಣ್ಣ ಅಮೆರಿಕ ಬಿಡುಗಡೆ ಮಾಡಿರುವ ನಕ್ಷೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ವ್ಯಾಪಾರ ಒಪ್ಪಂದ ಸಂಬಂಧ 'ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್' ಬಿಡುಗಡೆ ಮಾಡಿರುವ ಭಾರತದ ಭೂಪಟದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದೆ. ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಲಾಗಿದೆ.

ಆ ಮೂಲಕ ಪಾಕಿಸ್ತಾನಕ್ಕೆ ಸದ್ದಿಲ್ಲದೆ ತಿರುಗೇಟು ನೀಡಿದ್ದು, ಇದು ಭಾರತದ ರಾಜಕೀಯ ನಕ್ಷೆಗೆ ಅಮೆರಿಕದ ಸಮ್ಮತಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿಯೂ ಪಾಕ್ ಮೇಲೆ ಭಾರತದ 'ಆಪರೇಷನ್ ಸಿಂಧೂರ' ಮಿಲಿಟರಿ ಕಾರ್ಯಾಚರಣೆಯ ಬಳಿಕ ಅಮೆರಿಕದೊಂದಿಗೆ ಪಾಕಿಸ್ತಾನ ಉತ್ತಮ ಬಾಂಧವ್ಯ ಕಾಪಾಡಿಕೊಂಡಿತ್ತು. ಪಾಕಿಸ್ತಾನದ ಪ್ರಧಾನಿ, ಸೇನಾ ಮುಖ್ಯಸ್ಥರು ಸೇರಿದಂತೆ ಉನ್ನತ ನಾಯಕರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು.

ಮತ್ತೊಂದೆಡೆ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿರುವುದಾಗಿ ಹೇಳಿಕೊಂಡಿರುವ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಅತ್ಯುತ್ತಮ ಸ್ನೇಹಿತ ಎಂದೂ ಸಂಬೋಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.