ADVERTISEMENT

ಇಂಧನ ಬೆಲೆ ಏರಿಕೆ ವಿರೋಧಿಸಿ ಕಜಕಿಸ್ತಾನದಲ್ಲಿ ಹಿಂಸಾಚಾರ; ಸತ್ತವರ ಸಂಖ್ಯೆ 225

ಏಜೆನ್ಸೀಸ್
Published 16 ಜನವರಿ 2022, 11:31 IST
Last Updated 16 ಜನವರಿ 2022, 11:31 IST
ಕಜಕಿಸ್ತಾನದ ಅಲ್ಮಾಟಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದವರು ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದ್ದರ ಸಂಗ್ರಹ ಚಿತ್ರ   –ರಾಯಿಟರ್ಸ್‌ ಚಿತ್ರ
ಕಜಕಿಸ್ತಾನದ ಅಲ್ಮಾಟಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದವರು ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದ್ದರ ಸಂಗ್ರಹ ಚಿತ್ರ   –ರಾಯಿಟರ್ಸ್‌ ಚಿತ್ರ   

ಮಾಸ್ಕೊ: ಕಜಕಿಸ್ತಾನದಲ್ಲಿ ಇಂಧನ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದನ್ನು ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 225ಕ್ಕೆ ಏರಿದೆ. ಈ ಮೊದಲು ಸತ್ತವರ ಸಂಖ್ಯೆ 164 ಎಂದು ತಿಳಿಸಲಾಗಿತ್ತು.

ಜನವರಿ 2ರಂದು ಈ ಪ್ರತಿಭಟನೆಗಳು ಆರಂಭವಾಗಿದ್ದವು. ಮೃತರಲ್ಲಿ 19 ಮಂದಿ ಪೊಲೀಸ್‌ ಅಥವಾ ಸರ್ಕಾರಿ ಅಧಿಕಾರಿಗಳೂ ಸೇರಿದ್ದಾರೆ. 4,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕ್ರಿಮಿನಲ್ ಪ್ರಾಸಿಕ್ಯೂಷನ್‌ ಸರ್ವಿಸ್‌ನ ಮುಖ್ಯಸ್ಥ ಸೆರೆಕ್‌ ಶಲಬಯೆವ್‌ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಹಿಂಸಾಚಾರ ತಡೆಗಟ್ಟುವ ಸಲುವಾಗಿ ಕಜಕಿಸ್ತಾನದ ಅಧ್ಯಕ್ಷ ಕಸ್ಸಿಮ್‌–ಜೊಮರ್ಟ್‌ ಟೊಕಯೆವ್‌ ಅವರ ಕೋರಿಕೆಯ ಮೇರೆಗೆ ರಷ್ಯಾವು ತನ್ನ 2 ಸಾವಿರ ಸೈನಿಕರನ್ನು ಕಳುಹಿಸಿಕೊಟ್ಟಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.