ADVERTISEMENT

ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜತೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕ್

ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ

ಪಿಟಿಐ
Published 14 ನವೆಂಬರ್ 2019, 14:05 IST
Last Updated 14 ನವೆಂಬರ್ 2019, 14:05 IST
ಕುಲಭೂಷಣ್‌ ಜಾಧವ್‌
ಕುಲಭೂಷಣ್‌ ಜಾಧವ್‌   

ಇಸ್ಲಾಮಾಬಾದ್‌: ‘ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಭಾರತದ ಜತೆ ಯಾವುದೇ ಒಪ್ಪಂದವಿಲ್ಲ. ಸಂವಿಧಾನದ ಪ್ರಕಾರಅಂತರರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ನಿರ್ದೇಶನಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರಮೊಹಮ್ಮದ್‌ ಫೈಸಲ್‌ ತಿಳಿಸಿದ್ದಾರೆ.

ಜಾಧವ್‌ ಪ್ರಕರಣವನ್ನುಪುನರ್‌ಪರಿಶೀಲಿಸಲು ಹಲವು ಕಾನೂನು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪಾಕಿಸ್ತಾನ ಸೇನೆ ಬುಧವಾರ ತಿಳಿಸಿತ್ತು. ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಫೈಸಲ್‌, ‘ಯಾವುದೇ ಒಪ್ಪಂದವಿಲ್ಲ. ಎಲ್ಲ ನಿರ್ಧಾರಗಳೂ ಸ್ಥಳೀಯ ಕಾನೂನಿನ ಅನ್ವಯವಿರಲಿದೆ’ ಎಂದಿದ್ದಾರೆ.

‘ಸುಪ್ರೀಂ’ ತೀರ್ಪಿಗೆ ಖಂಡನೆ: ಬಾಬ್ರಿ ಮಸೀದಿ ಜಾಗವನ್ನು ಹಿಂದೂಗಳಿಗೆ ನೀಡಿದ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಫೈಸಲ್‌ ಖಂಡಿಸಿದ್ದಾರೆ. ‘450 ವರ್ಷದಿಂದ ಮಸೀದಿ ಮುಸ್ಲಿಮರ ಅಧೀನದಲ್ಲಿತ್ತು. ಈ ತೀರ್ಪು ಜಾತ್ಯತೀತತೆಯನ್ನು ಛಿದ್ರ ಮಾಡಿದೆ. ಈ ಪ್ರಕರಣದಲ್ಲಿ ಆಗಿರುವ ಅನ್ಯಾಯವನ್ನು ಎತ್ತಿ ತೋರಿಸಲು ಪಾಕಿಸ್ತಾನ ಎಲ್ಲ ಪ್ರಯತ್ನ ಮಾಡಲಿದೆ’ ಎಂದರು.

12 ಸಾವಿರ ಜನರ ಭೇಟಿ: ಕರ್ತಾರ್‌ಪುರಕ್ಕೆ ಮೊದಲ ದಿನ 12 ಸಾವಿರ ಸಿಖ್‌ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ ಎಂದು ಫೈಸಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.