ADVERTISEMENT

ಲ್ಯಾಂಬ್ಡಾ: ಕೊರನಾ ವೈರಸ್‌ನ ಹೊಸ ತಳಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 22:21 IST
Last Updated 7 ಜುಲೈ 2021, 22:21 IST
ಕೊರೊನಾ ವೈರಸ್
ಕೊರೊನಾ ವೈರಸ್   

ವಿಶ್ವಸಂಸ್ಥೆ: ಕೊರನಾ ವೈರಸ್‌ನ ಹೊಸ ರೂಪಾಂತರ ತಳಿ ‘ಲ್ಯಾಂಬ್ಡಾ’ ಕಾಣಿಸಿಕೊಂಡಿದೆ. ಈ ತಳಿಯ ಸೋಂಕಿನ ಪ್ರಸರಣ ಜಗತ್ತಿಗೆ ಹೊಸ ಅಪಾಯ ತಂದೊಡ್ಡಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಇಟಲಿ, ಜರ್ಮನಿ ಸೇರಿದಂತೆ 31 ರಾಷ್ಟ್ರಗಳಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈ ವರೆಗೆ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

‘ವೈರಸ್‌ನ ಲ್ಯಾಂಬ್ಡಾ ತಳಿಯ ಸೋಂಕು ತೀವ್ರವಾಗಿ ಪ್ರಸರಣವಾಗಬಲ್ಲದು. ಅಲ್ಲದೇ, ಕೋವಿಡ್‌ ಲಸಿಕೆಗಳಿಗೆ ಈ ತಳಿಯ ವೈರಸ್‌ ಪ್ರತಿರೋಧ ಒಡ್ಡುವ ಸಾಧ್ತತೆಗಳಿವೆ. ಆದರೆ, ಈ ವಾದವನ್ನು ಪುಷ್ಟೀಕರಿಸುವ ವೈಜ್ಞಾನಿಕ ಆಧಾರಗಳು ಲಭ್ಯವಿಲ್ಲ’ ಎಂದು ಬ್ರಿಟನ್‌ನ ಆರೋಗ್ಯ ಸಂಸ್ಥೆ ‘ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌’ನ (ಪಿಎಚ್ಇ) ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.