ಇಸ್ರೇಲ್-ಹಿಜ್ಬುಲ್ಲಾ ನಡುವೆ ಸಂಘರ್ಷ
ರಾಯಿಟರ್ಸ್ ಸಂಗ್ರಹ ಚಿತ್ರ
ಬೈರೂತ್: ಇಸ್ರೇಲ್–ಲೆಬನಾನ್ ಸಂಘರ್ಷದಲ್ಲಿ ಹಿಜ್ಬುಲ್ಲಾ ಬಂಡುಕೋರರು ಸೇರಿದಂತೆ 4,047 ಲೆಬನಾನ್ ಜನ ಮೃತಪಟ್ಟಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವ ಫೈರಾಸ್ ಅಭಿಯಾರ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಈ ವಿಷಯ ಹಂಚಿಕೊಂಡ ಅವರು ನಮ್ಮ ಇಲಾಖೆಯಿಂದ ನಾವು ದಾಖಲಿಸಿರುವ ಸಾವಿನ ಸಂಖ್ಯೆ ಮಾತ್ರ ಇಷ್ಟು. ಆದರೆ, ಇಸ್ರೇಲ್ ದಾಳಿಯಿಂದ ನಮ್ಮ ದೇಶದಲ್ಲಿ ಇದಕ್ಕೂ ಹೆಚ್ಚಿನ ಜನ ಮೃತರಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಕದನದಲ್ಲಿ ಇದುವರೆಗೆ ಹಿಜ್ಬುಲ್ಲಾ ಬಂಡುಕೋರರು ಸೇರಿದಂತೆ 16,668 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಸುಮಾರು ಐದು ಸಾವಿರ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2023ರಲ್ಲಿ ಹಮಾಸ್–ಇಸ್ರೇಲ್ ಯುದ್ಧ ಶುರುವಾದ ನಂತರ ಲೆಬನಾನ್‌ನಿಂದ ಹಿಜ್ಬುಲ್ಲಾ ಬಂಡುಕೋರರು ಪರೋಕ್ಷವಾಗಿ ಹಮಾಸ್‌ಗೆ ಸಹಾಯ ಮಾಡುತ್ತಿದ್ದರು. ಇದರಿಂದ ಕೆರಳಿದ್ದ ಇಸ್ರೇಲ್ ಆಗಾಗ ಲೆಬನಾನ್ ಮೇಲೆ ದಾಳಿ ನಡೆಸುತ್ತಿತ್ತು. ಆದರೆ, 2024 ಸೆಪ್ಟೆಂಬರ್‌ನಲ್ಲಿ ನಿರಂತರ ದಾಳಿ ಮಾಡಿ, ಇತ್ತೀಚೆಗೆ ಕದನ ವಿರಾಮ ಘೋಷಿಸಿದೆ.
ಸೆಪ್ಟೆಂಬರ್ 15ರ ನಂತರ ನಡೆದ ಇಸ್ರೇಲ್ ದಾಳಿಯಲ್ಲಿ ಸತ್ತವರೇ ಹೆಚ್ಚು ಎಂದು ಫೈರಾಸ್ ಅಭಿಯಾರ್ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.