ADVERTISEMENT

ಅಮೆರಿಕದ ಖ್ಯಾತ ಗಾಯಕ ಟೋನಿ ಬೆನೆಟ್‌ ನಿಧನ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2023, 16:32 IST
Last Updated 21 ಜುಲೈ 2023, 16:32 IST
   

ನ್ಯೂಯಾರ್ಕ್‌: ಕ್ಲಾಸಿಕಲ್‌ ಗಾಯಕರಾಗಿ ಏಳು ದಶಕಗಳ ಕಾಲ ಜನರ ಮನ ಗೆದ್ದ ಅಮೆರಿಕದ ಖ್ಯಾತ ಗಾಯಕ ಟೋನಿ ಬೆನೆಟ್‌ ನಿಧನರಾಗಿದ್ದಾರೆ (96), ಸಾವಿಗೆ ನಿಖರ ಕಾರಣವೇನೆಂಬದು ತಿಳಿದುಬಂದಿಲ್ಲ

ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸೇರಿ 20 ಗ್ರ್ಯಾಮಿ ಪ್ರಶಸ್ತಿಗಳಿಗೆ ಬೆನೆಟ್‌ ಭಾಜನರಾಗಿದ್ದಾರೆ. 

2016ರಲ್ಲಿ ಟೋನಿ ಅಲ್ಝೈಮರ್‌ ರೋಗಕ್ಕೆ ತುತ್ತಾಗಿದ್ದರು. ಹೀಗಾಗಿ 2021ರ ಆಗಸ್ಟ್‌3 ರಂದು ರೇಡಿಯೊ ಸಿಟಿ ಮ್ಯೂಸಿಕ್‌ ಹಾಲ್‌ನಲ್ಲಿ ಕೊನೆಯ ಸಂಗೀತ ಪ್ರದರ್ಶನ ನೀಡಿದ್ದರು. 

ADVERTISEMENT

ಎರಡನೆ ಮಹಾಯುದ್ಧದ ಸಮಯದಲ್ಲಿ ಯುರೋಪ್‌ನಲ್ಲಿ ಕಾಲಾಳುಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ, ನ್ಯೂಯಾರ್ಕ್‌ನ ಗ್ರೀನ್‌ವಿಚ್ ವಿಲೇಜ್‌ನಲ್ಲಿ ಬೆನೆಟ್ ಜೋ ಬ್ಯಾರಿ ಎಂಬ ಹೆಸರಿನಲ್ಲಿ ಹಾಡುತ್ತಿದ್ದರು. ಹಾಸ್ಯನಟರೊಬ್ಬರಿಂದ ಪ್ರಭಾವಿತರಾಗಿ, ತಮ್ಮ ಹೆಸರನ್ನು ಟೋನಿ ಬೆನೆಟ್ ಎಂದು ಬದಲಾಯಿಸಿಕೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.