ADVERTISEMENT

ವೆನಿಜುವೆಲಾದಲ್ಲಿ ರಾಜಕೀಯ ಬಿಕ್ಕಟ್ಟು

ಅವಧಿಗೆ ಮುನ್ನವೇ ಸಂಸತ್‌ ಚುನಾವಣೆಗೆ ಸಿದ್ಧ; ಅಧ್ಯಕ್ಷ ನಿಕೋಲಾಸ್‌

ಏಜೆನ್ಸೀಸ್
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST
ಗೈಡೊ
ಗೈಡೊ   

ಮಾಸ್ಕೊ/ಕಾರ್‌ಕಸ್‌: ವೆನಿಜುವೆಲಾದಲ್ಲಿನ ಬಿಕ್ಕಟ್ಟು ಇತ್ಯರ್ಥಗೊಳಿಸಲು ಮುಂದಾಗಿರುವ ಅಲ್ಲಿನ ಅಧ್ಯಕ್ಷ ನಿಕೋಲಾಸ್‌ ಮದುರೊ, ಅವಧಿಗೆ ಮುನ್ನವೇ ಸಂಸತ್‌ ಚುನಾವಣೆಗೆ ಸಿದ್ಧ ಎಂದು ಹೇಳಿದ್ದಾರೆ.

ಅಮೆರಿಕದ ಬೆಂಬಲ ಪಡೆದಿರುವ ವಿರೋಧ ಪಕ್ಷಗಳ ಜತೆಯೂ ಸಂಧಾನಕ್ಕೆ ಸಿದ್ಧ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ವಿರೋಧ ಪಕ್ಷದ ನಾಯಕ ಜೌನ್‌ ಗೈಡೊ ಅವರು ತಾವೇ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರಿಂದ ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಮೆರಿಕ, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳು ಗೈಡೊ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಪರಿಗಣಿಸಿ ಮಾನ್ಯತೆ ನೀಡಿದ್ದವು.

ADVERTISEMENT

ಗೈಡೊಗೆ ನಿರ್ಬಂಧ: ವಿರೋಧ ಪಕ್ಷದ ನಾಯಕ ಜುವಾನ್ ಗೈಡೊ ಅವರಿಗೆ ದೇಶದ ತೊರೆಯದಂತೆ ಸುಪ್ರೀಂಕೋರ್ಟ್‌ ನಿರ್ಬಂಧ ಹೇರಿದೆ.

ಗೈಡೊ ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.