* ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿರುವ ದಾಳಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುವ ಮೊದಲು ಪರಿಶೀಲಿಸಬೇಕು. ಪಾಕಿಸ್ತಾನ ಪರವಿರುವ ಖಾತೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ನಿಯತಕಾಲಿಕೆಗೆ ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸೂಚಿಸಿದೆ
* ಭಾರತದ 16 ಯುಟ್ಯೂಬ್ ಸುದ್ದಿ ಚಾನೆಲ್‌ಗಳು, 32 ಯುಟ್ಯೂಬ್ ಲಿಂಕ್‌ಗಳು, 32 ವೆಬ್‌ಸೈಟ್‌ಗಳನ್ನು ಪಾಕಿಸ್ತಾನ ನಿಷೇಧಿಸಿದೆ
* ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬುಧವಾರ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಭಾರತದ ದಾಳಿ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಯಿತು
* ಲಾಹೋರ್ ಸಮೀಪದ ಮುರಿಡ್ಕೆಯಲ್ಲಿರುವ ಹಫೀಜ್ ಸಯೀದ್ ನೇತೃತ್ವದ ಜಮಾತ್–ಉದ್–ದಾವಾ (ಜೆಯುಡಿ) ಕೇಂದ್ರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಸಂಘಟನೆಯ ಉಗ್ರರಾದ ಕಾರಿ ಅಬ್ದುಲ್ ಮಲಿಕ್, ಖಾಲಿದ್ ಹಾಗೂ ಮುದಸಿರ್ ಅಂತ್ಯಕ್ರಿಯೆಯಲ್ಲಿ ಸಂಘಟನೆ ಸದಸ್ಯರು ಹಾಗೂ ಪಾಕಿಸ್ತಾನ ಸೇನೆ ಸಿಬ್ಬಂದಿ ಪಾಲ್ಗೊಂಡಿದ್ದರು
* ಭಾರತದ ಪಡೆಗಳು ದಾಳಿ ನಡೆಸಿದ ನಂತರ ಇಸ್ಲಾಮಾಬಾದ್ ಮತ್ತು ಲಾಹೋರ್‌ನ ವಾಯುಪ್ರದೇಶವನ್ನು 48 ಗಂಟೆ ಬಂದ್ ಮಾಡಿದ್ದಾಗಿ ಘೋಷಿಸಿದ ಪಾಕಿಸ್ತಾನ ವಿಮಾನಗಳ ಮಾರ್ಗವನ್ನು ಕರಾಚಿಗೆ ಬದಲಾಯಿಸಿತು
* ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಝೈಡಾಂಗ್ ಅವರು ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ಭಾರತ ನಡೆಸಿದ ದಾಳಿ ಕುರಿತು ಚೀನಾ ರಾಯಭಾರಿಗೆ ವಿವರಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.