ADVERTISEMENT

ಟ್ರಂಪ್ ಆಡಳಿತದ ವೈಫಲ್ಯಗಳಿಂದ ಬೈಡನ್ ಪಾಠ ಕಲಿಯಲಿ

ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ವೈಫಲ್ಯ: ದಕ್ಷಿಣ ಕೊರಿಯಾ ಅಧ್ಯಕ್ಷರ ಅಭಿಮತ

ಏಜೆನ್ಸೀಸ್
Published 18 ಜನವರಿ 2021, 8:13 IST
Last Updated 18 ಜನವರಿ 2021, 8:13 IST
ಮೂನ್ ಜೆ ಇನ್‌
ಮೂನ್ ಜೆ ಇನ್‌   

ಸಿಯೋಲ್‌: ಅಮೆರಿಕ ಮತ್ತು ಉತ್ತರ ಕೊರಿಯಾದ ರಾಜತಾಂತ್ರಿಕ ಸಂಬಂಧದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅನುಭವಿಸಿದ ವೈಫಲ್ಯಗಳಿಂದ ಪಾಠ ಕಲಿತು, ಮುಂದಿನ ಹೆಜ್ಜೆ ಇಡುವಂತೆ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರಿಗೆ ದಕ್ಷಿಣ ಕೊರಿಯಾ ಅಧ್ಯಕ್ಷಮೂನ್‌ ಜೆ ಇನ್‌ ತಿಳಿಸಿದ್ದಾರೆ.

ಉತ್ತರ ಕೊರಿಯಾದ ನಾಯಕ ಅಧ್ಯಕ್ಷ ಕಿಮ್ ಜೊಂಗ್ ಉನ್ ಮತ್ತು ಟ್ರಂಪ್ ಅವರ ನಡುವೆ ಮೂರು ಶೃಂಗಸಭೆಗಳನ್ನು ಆಯೋಜಿಸಲು ಮೂನ್ ಜೆ ಇನ್ ತೀವ್ರ ಲಾಬಿ ಮಾಡಿದ್ದರು. ಆದರೆ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ನಡೆದ ‘ಪರಮಾಣು ನಿಶಸ್ತ್ರೀಕರಣ‘ ಕುರಿತ ಮಾತುಕತೆ ಯಶಸ್ವಿಯಾಗದ ಕಾರಣ, ಈ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆ ಸ್ಥಗಿತಗೊಂಡಿತು.

ಇಂಥ ವಿಚಾರಗಳಲ್ಲಿ ಟ್ರಂಪ್‌ಗಿಂತ ಬೈಡನ್ ಭಿನ್ನ ವಿಧಾನವನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ಮೂನ್ ಒಪ್ಪಿಕೊಂಡರೂ, ಉತ್ತರ ಕೊರಿಯಾ ನಿಭಾಯಿಸುವಲ್ಲಿ ಟ್ರಂಪ್‌ ಆಡಳಿತದ ರಾಜತಾಂತ್ರಿಕ ವೈಫಲ್ಯಗಳಿಂದ ಜೋ ಬೈಡನ್ ಆಡಳಿತ ಪಾಠ ಕಲಿಯಬೇಕು ಎಂಬುದನ್ನು ಒತ್ತಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.