ADVERTISEMENT

ಮ್ಯಾನ್ಮಾರ್‌: ಸೇನಾ ದಂಗೆ ವಿರೋಧಿಸಿದ್ದಕ್ಕಾಗಿ 1.25 ಲಕ್ಷ ಶಿಕ್ಷಕರ ಅಮಾನತು

ರಾಯಿಟರ್ಸ್
Published 23 ಮೇ 2021, 1:13 IST
Last Updated 23 ಮೇ 2021, 1:13 IST
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್)   

ಜಕಾರ್ತ: ಮ್ಯಾನ್ಮಾರ್‌ನಲ್ಲಿ ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆಯನ್ನು ವಿರೋಧಿಸಲು ನಾಗರಿಕ ಅಸಹಕಾರ ಚಳವಳಿಗೆ ಸೇರ್ಪಡೆಗೊಂಡಿದ್ದಕ್ಕಾಗಿ 1.25 ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರನ್ನು ಸೇನಾಧಿಕಾರಿಗಳು ಅಮಾನತು ಮಾಡಿದ್ದಾರೆ ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮರ್‌ನಲ್ಲಿ ಒಂದು ದಶಕದಿಂದ ಸರ್ಕಾರ ಮತ್ತು ಸೇನೆಯ ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಶಾಲಾ ವರ್ಷ ಪ್ರಾರಂಭವಾಗುವುದಕ್ಕೆ ಕೆಲವು ದಿನಗಳ ಬಾಕಿ ಇರುವಾಗ ಶಿಕ್ಷಕರ ಅಮಾನತು ಆದೇಶ ಪ್ರಕಟಿಸಲಾಗಿದೆ.

ಶನಿವಾರದ ವೇಳೆಗೆ ಒಟ್ಟು 1,25,900 ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಇದು ಕೇವಲ ಕರ್ತವ್ಯಕ್ಕೆ ಹಾಜರಾಗುವಂತೆ ಜನರನ್ನು ಬೆದರಿಸುವ ತಂತ್ರವಾಗಿದೆ. ಸೇನೆಯು ಜನರ ಮೇಲೆ ನಡೆಸುತ್ತಿರುವ ದೌಜರ್ನ್ಯ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ’ ಎಂದು ಶಿಕ್ಷಕರೂ ಆಗಿರುವ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.