ದಕ್ಷಿಣ ಕೊರಿಯಾ ಹಾಗೂ ರಷ್ಯಾ ಧ್ವಜಗಳು
ಸಿಯೊಲ್: ರಷ್ಯಾದ ಹಲವು ಯುದ್ಧ ವಿಮಾನಗಳು ನಮ್ಮ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ದಕ್ಷಿಣ ಕೊರಿಯಾ ಸೇನೆ ಶನಿವಾರ ಆರೋಪಿಸಿದೆ.
ದಕ್ಷಿಣ ಕೊರಿಯಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಗುರುತಿಸಲಾಗಿರುವ ವಾಯು ರಕ್ಷಣಾ ವಲಯಕ್ಕೆ ರಷ್ಯಾದ ಹಲವು ಮಿಲಿಟರಿ ವಿಮಾನಗಳು ಪ್ರವೇಶಿಸಿದ್ದವು. ಸ್ವಲ್ಪಹೊತ್ತಿನ ನಂತರ ತೆರಳಿವೆ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನಗಳು ಮುಂದುವರಿದಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿರುವುದು ದಕ್ಷಿಣ ಕೊರಿಯಾದಲ್ಲಿ ಆತಂಕ ಸೃಷ್ಟಿಸಿತ್ತು.
ಆದರೆ, 'ರಷ್ಯಾ ವಿಮಾನಗಳಿಂದ ವಾಯು ವಯಲದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ' ಎಂದು ದಕ್ಷಿಣ ಕೊರಿಯಾ ಸೇನೆ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.