

ಚುನಾವಣೆ
ಯಾಂಗೋನ್: ಮ್ಯಾನ್ಮಾರ್‌ನಲ್ಲಿ ಐದು ವರ್ಷಗಳ ಬಳಿಕ ಸೇನೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನವು ಭಾನುವಾರ ನಡೆಯಿತು.
ಇನ್ನೂ ಎರಡು ಹಂತದ ಮತದಾನಗಳ ಬಾಕಿ ಇದ್ದು, ಇದು ಜನವರಿಯಲ್ಲಿ ಪೂರ್ಣಗೊಳ್ಳಲಿದೆ.
ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದು ಸೇನೆ ಹೇಳಿದೆ. ಆದರೆ ಚುನಾವಣೆಗೂ ಮುನ್ನ ಪ್ರಮುಖ ವಿರೋಧಪಕ್ಷಗಳನ್ನು ನಿಷೇಧಿಸಲಾಗಿದೆ. ಮತದಾನ ಬಹಿಷ್ಕರಿಸಿದವರಿಂದ ಬಲವಂತವಾಗಿ ಮತ ಹಾಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಸಕಾಂಗ ಸ್ಥಾನಗಳಿಗೆ 57 ಪಕ್ಷಗಳಿಂದ ಒಟ್ಟು 4,800ಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದಾರೆ. ಆದರೆ ದೇಶದಾದ್ಯಂತ 6 ಪಕ್ಷಗಳು ಮಾತ್ರ ಸ್ಪರ್ಧೆ ನಡೆಸುತ್ತಿದ್ದಾವೆ.
2021ರಲ್ಲಿ ಚುನಾಯಿತ ಸರ್ಕಾರವನ್ನು ರದ್ದುಮಾಡಿ ಸೇನೆಯು ಅಧಿಕಾರವಹಿಸಿಕೊಂಡಿತ್ತು. ಈ ಬಗ್ಗೆ ತೀವ್ರ ಜನವಿರೋಧ ವ್ಯಕ್ತವಾಗಿತ್ತು.