ADVERTISEMENT

ಮ್ಯಾನ್ಮಾರ್‌: ಸೇನಾ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ದಂಗೆಗೆ ಕರೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 7:01 IST
Last Updated 7 ಸೆಪ್ಟೆಂಬರ್ 2021, 7:01 IST
ದುವಾ ಲಶಿ ಲಾ  –ಎಪಿ ಚಿತ್ರ
ದುವಾ ಲಶಿ ಲಾ –ಎಪಿ ಚಿತ್ರ   

ಬ್ಯಾಂಕಾಕ್‌: ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ದಂಗೆ ಏಳುವಂತೆ 'ನ್ಯಾಷನಲ್‌ ಯೂನಿಟಿ ಗವರ್ನ್‌ಮೆಂಟ್‌’(ಎನ್‌ಯುಜಿ) ಮಂಗಳವಾರ ಕರೆ ನೀಡಿದೆ.

‘ಸೇನಾ ಸರ್ಕಾರದ ವಿರುದ್ಧ ದೇಶದ ‍ಪ್ರತಿಯೊಂದು ಗ್ರಾಮ, ಪಟ್ಟಣ, ನಗರದಲ್ಲಿ ಏಕಕಾಲದಲ್ಲಿ ದಂಗೆ ಏಳಬೇಕು ಎಂದು ಕರೆ ನೀಡಿರುವಎನ್‌ಯುಜಿ ಹಂಗಾಮಿ ಅಧ್ಯಕ್ಷ ದುವಾ ಲಶಿ ಲಾ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ ಅವರ ಭಾಷಣದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

‘ದೇಶದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಛಾಯಾ ಸರ್ಕಾರದ ಪ್ರಧಾನಿಮಹನ್ ವಿನ್ ಖೈಂಗ್ ಥನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ.

ADVERTISEMENT

‘ಎನ್‌ಯುಜಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಲ್ಲ ಸಮುದಾಯಗಳು ತಕ್ಷಣವೇ ಸೇನಾ ಸರ್ಕಾರದ ಪಡೆಗಳ ಮೇಲೆ ದಾಳಿ ನಡೆಸಿ, ತಮ್ಮ ಭೂಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಇದು ಜನರ ಕ್ರಾಂತಿ. ಎಲ್ಲಾ ಸೈನಿಕರು ಮತ್ತು ಪೊಲೀಸರು ‘ಪೀಪಲ್ಸ್‌ ಡಿಫೆನ್ಸ್‌ ಪೋರ್ಸ್‌’ನೊಂದಿಗೆ ಕೈಜೋಡಿಸಬೇಕು. ಅಧಿಕಾರಿಗಳು ಕಚೇರಿಗಳಿಗೆ ತೆರಳಬಾರದು’ ದುವಾ ಲಶಿ ಸೂಚಿಸಿದ್ದಾರೆ.

ಫೆಬ್ರುವರಿ 1ರಂದು ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಮ್ಯಾನ್ಮಾರ್‌ ಸೇನೆಯು ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.