ಅಮಿತ್ ಕ್ಷತ್ರೀಯ
ವಾಷಿಂಗ್ಟನ್: ಭಾರತ ಮೂಲದ ಅಮೆರಿಕನ್ ಹಾಗೂ ನಾಸಾದ ಹಿರಿಯ ಆಡಳಿತ ತಜ್ಞ ಅಮಿತ್ ಕ್ಷತ್ರೀಯ ಅವರನ್ನು ನಾಸಾದ ಸಹಾಯಕ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ನಾಸಾದ ಪ್ರಸ್ತುತ ಮುಖ್ಯ ಆಡಳಿತಾಧಿಕಾರಿ ಸೀನ್ ಡುಪ್ಪಿ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮಿತ್ ಕ್ಷತ್ರೀಯ ಅವರು ನಾಸಾದಲ್ಲಿ ಕಳೆದ 22 ವರ್ಷದಿಂದ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಸಾದ ಮಹತ್ವಾಕಾಂಕ್ಷೆಯ ಮೂನ್ ಟು ಮಾರ್ಸ್ (Mars Programme in the Exploration Systems Development Mission Directorate) ಕಾರ್ಯಕ್ರಮದ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದ ದಂಪತಿಯ ಪುತ್ರರಾಗಿರುವ ಅಮಿತ್ ಕ್ಷತ್ರೀಯ ಅವರು ವಿಸ್ಕಾನ್ಸಿನ್ ಮೂಲದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.