ADVERTISEMENT

ಕೋವಿಡ್‌: ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ಹೇರಿದ ನೇಪಾಳ

ಪಿಟಿಐ
Published 9 ಆಗಸ್ಟ್ 2022, 14:35 IST
Last Updated 9 ಆಗಸ್ಟ್ 2022, 14:35 IST
ಕೋವಿಡ್‌
ಕೋವಿಡ್‌    

ಕಠ್ಮಂಡು: ಭಾರತದಿಂದ ಬಂದಿದ್ದ ನಾಲ್ವರಲ್ಲಿ ಕೋವಿಡ್‌ ದೃಢಪಟ್ಟಿರುವುದರಿಂದ ನೇಪಾಳವು ಭಾರತೀಯ ಪ್ರವಾಸಿಗರ ಮೇಲೆ ಮಂಗಳವಾರ ನಿರ್ಬಂಧ ಹೇರಿದೆ.

‘ಬೈತಡಿ ಜಿಲ್ಲೆಯ ಜುಲಾಘಾಟ್‌ ಗಡಿ ಮೂಲಕ ನೇಪಾಳ ಪ್ರವೇಶಿಸಿದ್ದ ಭಾರತದ ನಾಲ್ವರು ಪ್ರವಾಸಿಗರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿದೆ. ಭಾರತಕ್ಕೆ ಹಿಂತಿರುಗುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಬೈತಡಿ ಜಿಲ್ಲೆ ಆರೋಗ್ಯ ಇಲಾಖೆಯ ಮಾಹಿತಿ ಅಧಿಕಾರಿ ಬಿಪಿನ್‌ ಲೇಖಕ್‌ ತಿಳಿಸಿದ್ದಾರೆ.

‘ಭಾರತದಿಂದ ಬಂದಿರುವ ನೇಪಾಳದ ಪ್ರಜೆಗಳಲ್ಲೂ ಕೋವಿಡ್‌ ಕಾಣಿಸಿಕೊಂಡಿದೆ. ಸೋಂಕು ಪಸರಿಸುವಿಕೆ ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ಪ್ರವಾಸಿಗರ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.