ADVERTISEMENT

ಗಡಿ ವಿವಾದದ ನಡುವೆಯೇ ಭಾರತ–ನೇಪಾಳ ನಡುವೆ ಉನ್ನತ ಮಟ್ಟದ ಸಭೆ

ಪಿಟಿಐ
Published 17 ಆಗಸ್ಟ್ 2020, 13:26 IST
Last Updated 17 ಆಗಸ್ಟ್ 2020, 13:26 IST
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು 2018ರ ಏಪ್ರಿಲ್ 7ರಂದು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭಾರತ-ನೇಪಾಳ ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಮತ್ತು ಸಂಯೋಜಿತ ಚೆಕ್ ಪೋಸ್ಟ್ (ಐಸಿಪಿ) ಉದ್ಘಾಟನೆ ನೆರವೇರಿಸಿದ್ದರು. (ಎಎಫ್‌ಪಿ ಚಿತ್ರ)
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು 2018ರ ಏಪ್ರಿಲ್ 7ರಂದು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭಾರತ-ನೇಪಾಳ ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಮತ್ತು ಸಂಯೋಜಿತ ಚೆಕ್ ಪೋಸ್ಟ್ (ಐಸಿಪಿ) ಉದ್ಘಾಟನೆ ನೆರವೇರಿಸಿದ್ದರು. (ಎಎಫ್‌ಪಿ ಚಿತ್ರ)   

ಕಠ್ಮಂಡು: ಭಾರತದ ನೆರವಿನೊಂದಿಗೆ ನೇಪಾಳದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಸೋಮವಾರ ವರ್ಚುವಲ್‌ ಸಭೆಯ ಮೂಲಕ ಪರಾಮರ್ಶಿಸಿದರು.

ಭಾರತದ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಇತ್ತೀಚೆಗೆ ನೂತನ ನಕ್ಷೆ ಪ್ರಕಟಿಸಿತು. ಇದರ ನಂತರ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಳಸಿವೆ. ಈ ಮಧ್ಯೆ ಭಾರತದ 74ನೇ ಸ್ವಾತಂತ್ರ್ಯೋತ್ಸವದಂದು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದ್ದರು. ಈ ಬೆಳವಣಿಗೆ ನಂತರದಲ್ಲಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಪ್ರಥಮ ಸಭೆ ಇದೇ ಆಗಿದೆ.

ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಮತ್ತು ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಮೇಲ್ವಿಚಾರಣಾ ಸಭೆಯಲ್ಲಿ ಆಯಾ ದೇಶಗಳನ್ನು ಪ್ರತಿನಿಧಿಸಿದರು ಎಂದು ನೇಪಾಳ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ADVERTISEMENT

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದ ಹಿನ್ನೆಲೆಯಲ್ಲಿ ಕೇವಲ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಈ ಸಭೆಯಲ್ಲಿ ನೇಪಾಳದಲ್ಲಿ ಜಾರಿಗೆ ಬರುತ್ತಿರುವ ಭಾರತದ ನೆರವಿನ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ನಿರ್ಣಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.