ADVERTISEMENT

ಮಾನಸ ಸರೋವರ ರಸ್ತೆ: ಭಾರತದ ರಾಯಭಾರಿಗೆ ನೇಪಾಳ ಸಮನ್ಸ್

ಏಜೆನ್ಸೀಸ್
Published 12 ಮೇ 2020, 5:52 IST
Last Updated 12 ಮೇ 2020, 5:52 IST
ರಸ್ತೆ ಕಾಮಗಾರಿಯ ಚಿತ್ರ: ಕೃಪೆ– ಸಚಿವ ನಿತಿನ್ ಗಡ್ಕರಿ ಅವರ ಟ್ವಿಟರ್ ಖಾತೆ
ರಸ್ತೆ ಕಾಮಗಾರಿಯ ಚಿತ್ರ: ಕೃಪೆ– ಸಚಿವ ನಿತಿನ್ ಗಡ್ಕರಿ ಅವರ ಟ್ವಿಟರ್ ಖಾತೆ   

ಕಾಠ್ಮಂಡು: ಉತ್ತರಾಖಂಡದ ಚೀನಾ ಗಡಿಯಲ್ಲಿ ಲಿಪುಲೇಶ್ ಪಾಸ್‌ ಸಂಪರ್ಕಿಸುವಂತೆ ಹೊಸ ರಸ್ತೆ ನಿರ್ಮಿಸಿದ ವಿಚಾರವಾಗಿ ಭಾರತದ ರಾಯಭಾರಿಗೆ ನೇಪಾಳ ಸಮನ್ಸ್ ನೀಡಿದೆ.

ಗಡಿ ಸಮಸ್ಯೆಗೆ ಸಂಬಂಧಿಸಿ ನೇಪಾಳ ಸರ್ಕಾರದ ನಿಲುವನ್ನು ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರಿಗೆ ತಿಳಿಸಿದ್ದಾರೆ. ನೇಪಾಳದ ನಿಲುವಿನ ಕುರಿತ ರಾಜತಾಂತ್ರಿಕ ಟಿಪ್ಪಣಿಯನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಸೋಮವಾರ ಟ್ವೀಟ್ ಮಾಡಿತ್ತು.

ಮಾನಸ ಸರೋವರಕ್ಕೆ ತೆರಳಲು ನೆರವಾಗುವ ಹಾಗೂ ಸಮುದ್ರ ಮಟ್ಟದಿಂದ 17,000 ಅಡಿ ಎತ್ತರದ ಪ್ರದೇಶದಲ್ಲಿರುವ ರಸ್ತೆಯನ್ನು ಭಾರತ ಶುಕ್ರವಾರ ಉದ್ಘಾಟಿಸಿತ್ತು. ಇದಕ್ಕೆ ನೇಪಾಳ ತಕರಾರು ವ್ಯಕ್ತಪಡಿಸಿತ್ತು. ‘ಇದು ಭಾರತದ ಗಡಿಯೊಳಗಿನ ಕಾಮಗಾರಿ. ವಿವಾದಗಳನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ’ ಎಂದು ಭಾರತವೂ ಪ್ರತ್ಯುತ್ತರ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.