ಕಠ್ಮಂಡು: ಲಿಪುಲೇಖ್ ಪಾಸ್ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್–ಯುಎಂಎಲ್ ಒತ್ತಾಯಿಸಿದೆ.
ಉನ್ನತ ಮಟ್ಟದ ರಾಜತಾಂತ್ರಿಕ ಕ್ರಮಗಳ ಮೂಲಕ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಸೇರಿದಂತೆ ಕಾಳಿ ನದಿಯ ಪೂರ್ವ ಪ್ರದೇಶಗಳ ಮೇಲಿನ ತನ್ನ ಹಕ್ಕುಗಳನ್ನು ಪುನರುಚ್ಚರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಲಲಿತ್‌ಪುರದ ಗೋದಾವರಿ ಪುರಸಭೆಯಲ್ಲಿ ಸೆ.5ರಿಂದ 7ರವರೆಗೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದಲ್ಲಿ ನಡೆದ ಸಿಪಿಎನ್–ಯುಎಂಎಲ್‌ನ ಎರಡನೇ ರಾಷ್ಟ್ರೀಯ ಸಮಾವೇಶದಲ್ಲಿ ಅಂಗೀಕರಿಸಿದ 28 ಅಂಶಗಳ ಪ್ರಸ್ತಾವದಲ್ಲಿ ಇದು ಸೇರಿದೆ.
ಚೀನಾಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ಒಲಿ ಅವರು ಲಿಪುಲೇಖ್ ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.
‘ಲಿಪುಲೇಖ್ ತನ್ನ ಸ್ವಂತ ಪ್ರದೇಶ’ ಎಂದು ನೇಪಾಳ ಹೇಳಿಕೊಂಡಿದ್ದು, ಅದನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಿದೆ. ‘ಇದು ಸತ್ಯವನ್ನು ಆಧರಿಸಿಲ್ಲ ಹಾಗೂ ಐತಿಹಾಸಿಕ ಪುರಾವೆಗಳನ್ನು ಹೊಂದಿಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.