ADVERTISEMENT

ಇಸ್ರೇಲ್‌: ‘ಸರ್ವಸಮ್ಮತ ಸರ್ಕಾರ’ ರಚನೆಗೆ ಒಲವು

ಅತಂತ್ರ ಚುನಾವಣಾ ಫಲಿತಾಂಶ; ನಾನೇ ಪ್ರಧಾನಿ ಆಗಬೇಕು–ಗಾಂಟ್ಜ್‌ ಪ್ರತಿಪಾದನೆ

ಪಿಟಿಐ
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST
ಬೆನ್ನಿ ಗಾಂಟ್ಜ್‌
ಬೆನ್ನಿ ಗಾಂಟ್ಜ್‌   

ಜೆರುಸಲೆಂ: ಅತಂತ್ರ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ವಸಮ್ಮತ ಸರ್ಕಾರ ರಚನೆ ಕುರಿತು ಮುಖ್ಯ ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಜ್‌ ಅವರ ಜತೆಗೆ ಚರ್ಚೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮುಂದಾಗಿದ್ದಾರೆ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಮೂಡಿದೆ. ಮೂರನೇ ಬಾರಿಗೆ ಚುನಾವಣೆಗೆ ಹೋಗುವುದನ್ನು ತಪ್ಪಿಸಲು ಸರ್ವಸಮ್ಮತ ಸರ್ಕಾರ ರಚನೆಗೆ ಒಲವು ತೋರಿದ್ದಾರೆ.

ನಾನೇ ಪ್ರಧಾನಿ ಆಗಬೇಕು: ‘ಸರ್ವಸಮ್ಮತ’ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಪ್ರಧಾನಿ ಆಗಬೇಕು’ ಎಂದು ಬೆನ್ನಿ ಗಾಂಟ್ಜ್‌ ಪ್ರತಿಪಾದಿಸಿದ್ದಾರೆ. ಚುನಾವಣಾ ಫಲಿತಾಂಶ ಅತಂತ್ರವಾಗಿದ್ದು, ಗಾಂಟ್ಜ್‌ ಅವರ ಬ್ಲೂ ಅಂಡ್ ವೈಟ್‌ ಪಕ್ಷ ಸ್ಥಾನಗಳಿಕೆಯಲ್ಲಿ ಮುಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.