ADVERTISEMENT

ನ್ಯೂಯಾರ್ಕ್‌: ಜೂನ್‌ 8 ರಿಂದ ಆರ್ಥಿಕತೆ ಪುನರಾರಂಭ

ಪಿಟಿಐ
Published 30 ಮೇ 2020, 21:54 IST
Last Updated 30 ಮೇ 2020, 21:54 IST
ಆ್ಯಂಡ್ರೂ ಕ್ಯುಮೊ
ಆ್ಯಂಡ್ರೂ ಕ್ಯುಮೊ    

ನ್ಯೂಯಾರ್ಕ್: ಕೋವಿಡ್‌–19ನಿಂದ ತತ್ತರಿಸಿರುವ ನ್ಯೂಯಾರ್ಕ್‌ ನಗರದಲ್ಲಿ ಜೂನ್‌ 8ರಿಂದ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು ಎಂದುಗವರ್ನರ್‌ ಆ್ಯಂಡ್ರೂ ಕ್ಯುಮೊ ತಿಳಿಸಿದ್ದಾರೆ.

‘ಆರ್ಥಿಕ ಪುನಃಶ್ಚೇತನದಿಂದ ಮೊದಲ ಹಂತದಲ್ಲಿಸುಮಾರು 40 ಲಕ್ಷ ಮಂದಿ ಮತ್ತೆ ಉದ್ಯೋಗಕ್ಕೆ ತೆರಳಲಿದ್ದಾರೆ’ ಎಂದು ತಿಳಿಸಿದ್ದಾರೆ.

ರಾಜ್ಯದಾದ್ಯಂತ ಪ್ರಾದೇಶಿಕ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಗೊಂಡರೂ,ಮೊದಲ ಹಂತದ ಪುನರಾರಂಭಕ್ಕೆ ಅಗತ್ಯವಾದ ಏಳು ಆರೋಗ್ಯ ಸಂಬಂಧಿತ ಮಾನದಂಡಗಳತಯಾರಿ ನಡೆಯದ ಕಾರಣ ನ್ಯೂಯಾರ್ಕ್ ನಗರದಲ್ಲಿ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ಮೊದಲ ಹಂತದಲ್ಲಿ ಉತ್ಪಾದನೆ ಮತ್ತು ಸಗಟು ಪೂರೈಕೆ, ರಿಟೇಲ್‌ ವ್ಯಾಪಾರ ವಹಿವಾಟು ಕೃಷಿ, ಅರಣ್ಯ ಮತ್ತು ಮೀನುಗಾರಿಕೆಗೆ ಪುನರಾರಂಭಕ್ಕೆ ಅವಕಾಶ ನೀಡಲಾಗುವುದು ಎಂದರು.

ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದೆ ಎಂದಾಕ್ಷಣ ಸಹಜ ಪರಿಸ್ಥಿತಿಗೆ ಹಿಂದಿರುಗಿದ್ದೇವೆ ಎಂದಲ್ಲ. ಇದೊಂದು ಹೊಸ ಆಯಾಮ. ಜನರು ಸುರಕ್ಷಿತವಾಗಿರುವುದು ಅಗತ್ಯ ಎಂದಿದ್ದಾರೆ.

ನಗರದಲ್ಲಿ ಈವರೆಗೆ 1.99 ಲಕ್ಷ ಸೋಂಕಿತರಿದ್ದು, 20 ಸಾವಿರ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.