ADVERTISEMENT

ನ್ಯೂಯಾರ್ಕ್‌ನಲ್ಲಿ ಭಾರಿ ಮಳೆ: ವಿಮಾನ ನಿಲ್ದಾಣ, ರೈಲ್ವೆ ಸುರಂಗ ಮಾರ್ಗ ಜಲಾವೃತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2023, 4:33 IST
Last Updated 30 ಸೆಪ್ಟೆಂಬರ್ 2023, 4:33 IST
<div class="paragraphs"><p>ರೈಲ್ವೆ ಸುರಂಗ ಮಾರ್ಗ ಮತ್ತು ರಸ್ತೆಗಳು ನೀರಿನಿಂದ&nbsp;ಜಲಾವೃತವಾಗಿವೆ</p></div>

ರೈಲ್ವೆ ಸುರಂಗ ಮಾರ್ಗ ಮತ್ತು ರಸ್ತೆಗಳು ನೀರಿನಿಂದ ಜಲಾವೃತವಾಗಿವೆ

   

ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಸುರಂಗ ಮಾರ್ಗಗಳಿಗೆ ನೀರು ನುಗ್ಗಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ADVERTISEMENT

ನ್ಯೂಯಾರ್ಕ್ ನಗರ, ಲಾಂಗ್ ಐಲ್ಯಾಂಡ್ ಮತ್ತು ಹಡ್ಸನ್ ವ್ಯಾಲಿಯಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನೀರು ತುಂಬಿರುವ ಕಾರಣ ವಿಮಾನ ನಿಲ್ದಾಣದ ಟರ್ಮಿನಲ್‌ ಒಂದನ್ನು ಮುಚ್ಚಲಾಗಿದೆ. ಮತ್ತು ರೈಲ್ವೆ ಸುರಂಗ ಮಾರ್ಗಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರುಗಳು ಸೇರಿದಂತೆ ಇತರೆ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಹಲವೆಡೆ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಅನಗತ್ಯವಾಗಿ ಹೊರಗೆ ಹೋಗದಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

‘ನೀವು ಮನೆಯಲ್ಲಿದ್ದರೆ, ಮನೆಯಲ್ಲೇ ಇರಿ. ನೀವು ಕಚೇರಿಗೆ ತೆರಳಿದ್ದರೆ ಅಥವಾ ಶಾಲೆಯಲ್ಲಿದ್ದರೆ ಸದ್ಯದ ಮಟ್ಟಿಗೆ ಅಲ್ಲೇ ಆಶ್ರಯ ಪಡೆಯಿರಿ. ಭಾರಿ ಮಳೆ ಕಾರಣದಿಂದ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ’ ಎಂದು ಮೇಯರ್ ಎರಿಕ್ ಆಡಮ್ಸ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.