ADVERTISEMENT

ಕೊಕೇನ್ ವಶ: ನೈಜೀರಿಯಾ ಪೊಲೀಸರಿಂದ 22 ಭಾರತೀಯರ ಬಂಧನ

ಪಿಟಿಐ
Published 5 ಜನವರಿ 2026, 16:37 IST
Last Updated 5 ಜನವರಿ 2026, 16:37 IST
   

ಅಬುಜಾ: ಹಡಗಿನಲ್ಲಿದ್ದ 31.5 ಕೆ.ಜಿ ಕೊಕೇನ್‌ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರನ್ನು ಬಂಧಿಸಿದ್ದಾರೆ.

ಲಾಗೋಸ್‌ನ ಅಪಾಪಾ ಬಂದರಿನ ಜಿಡಿಎನ್‌ಎಲ್‌ ಟರ್ಮಿನಲ್‌ನಲ್ಲಿದ್ದ ‘ಎಂವಿ ಅರುಣ ಹುಲ್ಯ’ ಎಂಬ ವ್ಯಾಪಾರಿ ಹಡಗನ್ನು ಶೋಧಿಸಿದ ನೈಜೀರಿಯಾದ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳಿಗೆ ಕೊಕೇನ್ ದೊರೆತಿದೆ ಎಂದು ವೆಬ್‌ ಪೋರ್ಟಲ್‌ ‘ಪಂಚ್’ ವರದಿ ಮಾಡಿದೆ.

ಕೊಕೇನ್‌ ಪತ್ತೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರಲ್ಲಿ ಹಡಗಿನ ಮಾಸ್ಟರ್‌ ಶರ್ಮಾ ಶಶಿ ಭೂಷಣ್‌ ಮತ್ತು 21 ಸಿಬ್ಬಂದಿ ಇದ್ದಾರೆ ಎಂದು ಮಾಧ್ಯಮ ಮತ್ತು ವಕಾಲತ್ತು ನಿರ್ದೇಶಕ ಫೆಮಿ ಬಾಬಾಫೆಮಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.