ADVERTISEMENT

ಅಫ್ಗನ್ ಕಸಿಯಲು ತಾಲಿಬಾನ್‌ಗೆ ಪಾಕ್ ನೆರವು ನೀಡಿರುವ ಬಗ್ಗೆ ಪುರಾವೆ ಇಲ್ಲ: ಅಮೆರಿಕ

ಪಿಟಿಐ
Published 3 ಸೆಪ್ಟೆಂಬರ್ 2021, 1:23 IST
Last Updated 3 ಸೆಪ್ಟೆಂಬರ್ 2021, 1:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಫ್ಗಾನಿಸ್ತಾನವನ್ನು ವಶಪಡಿಸಿಕೊಳ್ಳಲು ತಾಲಿಬಾನಿಗಳಿಗೆ ಪಾಕಿಸ್ತಾನ ನೆರವಾಗಿತ್ತು ಎಂಬುದನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅಮೆರಿಕದ ಭದ್ರತಾ ಪ್ರಧಾನ ಕಚೇರಿ ಪೆಂಟಗನ್ ತಿಳಿಸಿದೆ.

ಅಫ್ಗಾನಿಸ್ತಾನ ಹಾಗೂ ಕಾಬೂಲ್ ಅನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು10,000ದಿಂದ 15,000 ಮಂದಿಯನ್ನು ರವಾನಿಸಿತ್ತು ಎಂದು ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಆರೋಪಿಸಿದ್ದರು.

ಆದರೆ ಇದನ್ನು ದೃಢೀಕರಿಸುವ ಪುರಾವೆಗಳಿಲ್ಲ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಹೇಳಿದಂತೆ ಪಾಕಿಸ್ತಾನ ಕೂಡಾ ಅಫ್ಗನ್ ಗಡಿಯುದ್ಧಕ್ಕೂ ಸಮಾನ ಹಿತಾಸಕ್ತಿಯನ್ನು ಹೊಂದಿದೆ. ಪಾಕ್ ಕೂಡಾ ಭಯೋತ್ಪಾದನೆಗೆ ತುತ್ತಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.