ಚಿಮಣಿಯಿಂದ ಕಪ್ಪು ಹೊಗೆ
-ರಾಯಿಟರರ್ಸ್ ಚಿತ್ರ
ವ್ಯಾಟಿಕನ್ ಸಿಟಿ: ಇಲ್ಲಿನ ಸಿಸ್ಟೈನ್ ಚಾಪೆಲ್‌ನ ಚರ್ಚ್ ಚಿಮಣಿಯಿಂದ ಕಪ್ಪು ಹೊಗೆ ಹೊರಬಂದಿದೆ. ಎರಡು ಅಥವಾ ಮೂರನೇ ಸುತ್ತಿನ ಗೋಪ್ಯ ಮತದಾನದಲ್ಲಿ ಕ್ಯಾಥೋಲಿಕ್ ಚರ್ಚ್ ನೇತೃತ್ವವನ್ನು ವಹಿಸಲಿರುವ ನೂತನ ಪೋಪ್ ಆಯ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಗುರುವಾರ ಬೆಳಗ್ಗೆ 11.50ರ ವೇಳೆಗೆ ಕಪ್ಪು ಬಣ್ಣದ ಹೊಗೆ ಹೊರಬಂದಿದೆ. ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ. ಪೋಪ್ ಆಗಿ ಆಯ್ಕೆಯಾಗಬಯಸುವವರು ಕನಿಷ್ಠ 89 ಅಥವಾ ಮೂರನೇ ಎರಡರಷ್ಟು ಮತಗಳನ್ನು ಪಡೆಯಬೇಕು. ಆದರೆ, ಯಾರೊಬ್ಬರೂ ಸಹ ಇಷ್ಟು ಮತಗಳನ್ನು ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.