
ಟೆಹರಾನ್ : ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್ ಶಾಂತಿ ಪುರಸ್ಕೃತೆ ನರ್ಗಿಸ್ ಮೊಹಮ್ಮದಿ ಅವರಿಗೆ ಇರಾನ್ ನ್ಯಾಯಾಲಯವು ಆರು ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ.
‘ಅಪರಾಧಗಳನ್ನು ಮಾಡಲು ಒಂದೆಡೆ ಸೇರಿ, ಒಳಸಂಚು ರೂಪಿಸಿದ ಆರೋಪದ ಮೇಲೆ ಅವರಿಗೆ ಆರು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದ್ದು, ಎರಡು ವರ್ಷದಿಂದ ದೇಶದಿಂದ ಹೊರಗೆ ತೆರಳದಂತೆ ನಿಷೇಧ ಹೇರಲಾಗಿದೆ’ ಎಂದು ಅವರ ಪರ ವಕೀಲ ಮೊಸ್ತಫ ನಿಲ್ಲಿ ತಿಳಿಸಿದ್ದಾರೆ.
‘ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪದ ಮೇಲೆ ಮೊಹಮ್ಮದಿ ಅವರಿಗೆ ಒಂದೂವರೆ ವರ್ಷ ಜೈಲುಶಿಕ್ಷೆ ವಿಧಿಸಲಾಗಿದ್ದು, ದಕ್ಷಿಣ ಖೊರ್ಸಾನ್ ನಗರದ ಖೊಸ್ಫ್ ಪಟ್ಟಣದಿಂದ ಎರಡು ವರ್ಷಗಳ ಕಾಲ ಗಡಿಪಾರು ವಿಧಿಸಲಾಗಿದೆ’ ಎಂದು ವಕೀಲರು ತಿಳಿಸಿದ್ದಾರೆ.
ಮೊಹಮ್ಮದಿ ಅವರು ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳು, ಪ್ರಜಾಪ್ರಭುತ್ವದ ಪರವಾಗಿ ಮತ್ತು ಮರಣ ದಂಡನೆ ಶಿಕ್ಷೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಇರಾನ್‌ನಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರ ಪರ ಧ್ವನಿ ಎತ್ತಿದ, ಮಾನವ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಎಲ್ಲರಿಗೂ ಸ್ವಾತಂತ್ರ್ಯ ಸಿಗಬೇಕೆನ್ನುವ ಆಶಯದಿಂದ ಕೆಲಸ ಮಾಡಿದ ಕಾರಣಕ್ಕಾಗಿ ನರ್ಗಿಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.