ಡೊನಾಲ್ಡ್ ಟ್ರಂಪ್
– ಫೇಸ್‌ಬುಕ್ ಚಿತ್ರ
ವಾಷಿಂಗ್ಟನ್: ‘ಯಾವುದೇ ಅಧ್ಯಕ್ಷರು ಒಂದೇ ಒಂದು ಯುದ್ಧ ನಿಲ್ಲಿಸಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ನಾನು 8 ತಿಂಗಳಿನಲ್ಲಿ 8 ಯುದ್ಧ ನಿಲ್ಲಿಸಿದ್ದೇನೆ. ಆದರೂ ನನಗೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ. ಮುಂದಿನ ವರ್ಷ ಸಿಗಬಹುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಯುದ್ಧ ನಿಲ್ಲಿಸುವ ಮೂಲಕ ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
‘ಪಾಕಿಸ್ತಾನ ಪ್ರಧಾನಿ ಚೆನ್ನಾಗಿ ಹೇಳಿದರು. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದೆ ಎಂದರು. ಭಾರತದೊಂದಿಗೆ ಪರಮಾಣು ಯುದ್ಧವಾಗುತ್ತಿತ್ತು ಎನ್ನುವುದನ್ನು ಅವರು ಉಲ್ಲೇಖಿಸಿದ್ದರು’ ಎಂದು ಟ್ರಂಪ್ ಹೇಳಿದ್ದಾರೆ.
‘ವ್ಯಾಪಾರವನ್ನು ಮುಂದಿಟ್ಟುಕೊಂಡು ನಾವು ಹಲವು ಯುದ್ಧವನ್ನು ನಿಲ್ಲಿಸಿದ್ದೇವೆ. ಉದಾಹರಣೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಏಳು ವಿಮಾನಗಳನ್ನು ಹೊಡೆದು ಹಾಕಲಾಗಿತ್ತು. ಕೆಟ್ಟ ಸಂಗತಿಗಳು ನಡೆಯುತ್ತಿತ್ತು. ನಾನು ಅವರಿಬ್ಬರೊಂದಿಗೆ ವ್ಯಾಪಾರದ ವಿಷಯ ಮಾತನಾಡಿದೆ’ ಎಂದು ಟ್ರಂಪ್ ಹೇಳಿದ್ದಾರೆ.
(ಶ್ವೇತಭನವದ ಯೂಟ್ಯೂಬ್ ವಿಡಿಯೊ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.