ADVERTISEMENT

ಉತ್ತರ ಕೊರಿಯಾ: ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸಿದ್ದಕ್ಕೆ ಬಾಲಕರಿಗೆ ಗಲ್ಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 15:55 IST
Last Updated 6 ಡಿಸೆಂಬರ್ 2022, 15:55 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸಿನಿಮಾಗಳನ್ನು ವೀಕ್ಷಿಸಿದ್ದಕ್ಕಾಗಿ ಉತ್ತರ ಕೊರಿಯಾ ಸರ್ಕಾರವು ಪ್ರೌಢಶಾಲೆಯ ಇಬ್ಬರು ಬಾಲಕರನ್ನು ಗಲ್ಲಿಗೇರಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ದಕ್ಷಿಣ ಕೊರಿಯಾ ಸಿನಿಮಾಗಳ (ಕೆ–ಡ್ರಾಮಾ) ವೀಕ್ಷಣೆ ಅಥವಾ ವಿತರಣೆಯನ್ನು ಉತ್ತರ ಕೊರಿಯಾ ಸರ್ಕಾರ ನಿಷೇಧಿಸಿದೆ. 16 ಮತ್ತು 17 ವರ್ಷದ ಬಾಲಕರಿಬ್ಬರು ಉತ್ತರ ಕೊರಿಯಾದ ರ‍್ಯಾಂಗ್‌ಗ್ಯಾಂಗ್‌ ಪ್ರಾಂತ್ಯದಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಭೇಟಿಯಾಗಿದ್ದರು. ನಂತರ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಹಲವು ಚಲನಚಿತ್ರಗಳನ್ನು ವೀಕ್ಷಿಸಿದ್ದರು. ಹೀಗಾಗಿ ಇವರನ್ನು ಸ್ಥಳೀಯರ ಸಮ್ಮುಖದಲ್ಲೇ ಗಲ್ಲಿಗೇರಿಸಲಾಗಿದೆ ಎಂದು ಬ್ರಿಟನ್‌ನ ‘ದಿ ಇಂಡಿಪೆಂಡೆಂಟ್‌’ ಪತ್ರಿಕೆ ವರದಿ ಮಾಡಿದೆ’ ಎಂದು ವರದಿ ತಿಳಿಸಿದೆ.

‘ಅಕ್ಟೋಬರ್‌ನಲ್ಲೇ ಬಾಲಕರನ್ನು ಗಲ್ಲಿಗೇರಿಸಲಾಗಿತ್ತು. ಈ ಸುದ್ದಿ ಹೋದ ವಾರ ಬೆಳಕಿಗೆ ಬಂದಿದೆ. ಬಾಲಕರು ದುಷ್ಟ ಕೃತ್ಯ ಎಸಗಿದ್ದಾರೆ. ಹೀಗಾಗಿ ಅವರನ್ನು ಸ್ಥಳೀಯರ ಎದುರೇ ಗಲ್ಲಿಗೇರಿಸಲಾಗಿದೆ ಎಂದು ಉತ್ತರ ಕೊರಿಯಾ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.