ADVERTISEMENT

ಉತ್ತರ ಕೊರಿಯಾ ಪೂರ್ವ ಕರಾವಳಿಯತ್ತ ಖಂಡಾಂತರ ಕ್ಷಿಪಣಿ ಸಿಡಿಸಿದೆ: ದಕ್ಷಿಣ ಕೊರಿಯಾ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 1:09 IST
Last Updated 25 ಸೆಪ್ಟೆಂಬರ್ 2022, 1:09 IST
   

ಸಿಯೋಲ್:ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯ ಸಮುದ್ರದತ್ತ ಭಾನುವಾರ ಅನಿರ್ದಿಷ್ಟ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಮುಂದಿನ ವಾರ ದಕ್ಷಿಣ ಕೊರಿಯಾಗೆ ಆಗಮಿಸಲಿದ್ದಾರೆ. ಅಷ್ಟಲ್ಲದೆ,ಯುಎಸ್‌ ಯುದ್ಧ ವಿಮಾನವಾಹಕ ನೌಕೆಯು ಜಂಟಿ ಸಮರಾಭ್ಯಾಸ ನಡೆಸಲು ದೇಶಕ್ಕೆ ಆಗಮಿಸಿರುವ ಸಂದರ್ಭದಲ್ಲಿ ಈ ಕ್ಷಿಪಣಿ ಹಾರಿಸಿದೆ ಎಂದು ದಕ್ಷಿಣ ಕೊರಿಯಾ ಕಿಡಿಕಾರಿದೆ.

ಉತ್ತರ ಕೊರಿಯಾಶಸ್ತ್ರಾಸ್ತ್ರ ಪರೀಕ್ಷೆಯನ್ನು ಮುಂದುವರಿಸಿದೆ ಎಂದುದಕ್ಷಿಣ ಕೊರಿಯಾ ಜೂನ್‌ ತಿಂಗಳಲ್ಲಿಯೂ ಆರೋಪಿಸಿತ್ತು. 'ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯೊಂದನ್ನು ಪೂರ್ವ ಸಮುದ್ರದತ್ತ ಹಾರಿಸಿಸಲಾಗಿದೆ'ಎಂದು ಜಪಾನ್‌ನ ಮಾಹಿತಿ ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.